ಮಾಜಿ ಸಿಎಂ ಹಾಗೂ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದಾರೆ ಈ ಕ್ಷೇತ್ರದಲ್ಲಿ. 2019 ರ ಲೋಕ ಸಮರದಲ್ಲಿ ಬಿಜೆಪಿ – ಮೈತ್ರಿ ಅಭ್ಯರ್ಥಿ ಪ್ರಮುಖ ಎದುರಾಳಿಗಳು. ಬಿಜೆಪಿಯಿಂದ ಹಾಲಿ ಸಂಸದ ಪ್ರತಾಪಸಿಂಹ ಹಾಗೂ ಕಾಂಗ್ರೆಸ್ ನಿಂದ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಕಣದಲ್ಲಿದ್ದಾರೆ.
ಸಿದ್ದರಾಮಯ್ಯ ತವರಿನಲ್ಲಿ ಜೆಡಿಎಸ್ ಟಿಕೆಟ್ ಗೆ ಬೇಡಿಕೆ ಇಟ್ಟಿತ್ತು. ಆದರೆ ಕೈಪಡೆ ಟಿಕೆಟ್ ಪಡೆದುಕೊಳ್ಳುವಲ್ಲಿ ಸಫಲವಾಗಿದೆ. ಕ್ಷೇತ್ರದ ಮಟ್ಟಿಗೆ ಇಲ್ಲಿ ನಡೆಯುತ್ತಿರುವುದು ಮೋದಿ ಮತ್ತು ಸಿದ್ದರಾಮಯ್ಯ ನಡುವಿನ ಹೋರಾಟ ಎಂದೇ ಹೇಳಲಾಗುತ್ತಿದೆ.
2014 ರಲ್ಲಿ ಕಾಂಗ್ರೆಸ್ ನ ಹೆಚ್. ವಿಶ್ವನಾಥ್ ಅವರನ್ನು ಬಿಜೆಪಿಯ ಪ್ರತಾಪ ಸಿಂಹ 31 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.
Constituency
Status
ಒಟ್ಟು 18,59,011 ರಲ್ಲಿ 9,28,930 ಪುರುಷರು, 9,30,056 ಮಹಿಳಾ ಹಾಗೂ 25 ಇತರೆ ಮತದಾರರಿದ್ದಾರೆ.