ನೀರಿನ ಸಮಸ್ಯೆಯನ್ನು ಜ್ವಲಂತವಾಗಿಟ್ಟು ಅದರಲ್ಲಿ ರಾಜಕೀಯ ನಡೆಯುತ್ತಿರುವುದು ಈ ಕ್ಷೇತ್ರದ ದುರ್ದೈವ. ಕಾಂಗ್ರೆಸ್-ಬಿಜೆಪಿ ನೇರ ಫೈಟ್ ಇಲ್ಲಿದೆ. 2019 ರ ಲೋಕ ಕದನದಲ್ಲಿ ಕಾಂಗ್ರೆಸ್ ನಿಂದ ಹಾಲಿ ಸಂಸದ ಕೆ.ಹೆಚ್.ಮುನಿಯಪ್ಪ, ಬಿಜೆಪಿಯಿಂದ ಎಸ್.ಮುನಿಸ್ವಾಮಿ ಕಣದಲ್ಲಿದ್ದಾರೆ.
ದಲಿತ, ಹಿಂದುಳಿದ ಲೆಕ್ಕಾಚಾರ ಇಲ್ಲಿ ಭಲೇ ಜೋರು. ಈವರೆಗೆ ನಡೆದ 16 ಚುನಾವಣೆಗಳಲ್ಲಿ 15 ರಲ್ಲಿ ಕೈ ಪಡೆ ಗೆಲುವು ದಾಖಲು ಮಾಡಿದೆ. ಇದು ಕಾಂಗ್ರೆಸ್ ನ ಭದ್ರಕೋಟೆ. 1991ರಿಂದ ಕೆ.ಹೆಚ್.ಮುನಿಯಪ್ಪರದ್ದೇ ಅಧಿಕಾರ ಇಲ್ಲಿದೆ.
2014 ರ ಚುನಾವಣೆಯಲ್ಲಿ ಜೆಡಿಎಸ್ ನ ಕೇಶವ ಹಾಗೂ ಬಿಜೆಪಿಯ ಎಂ.ನಾರಾಯಣಸ್ವಾಮಿ ಅವರನ್ನು ಸೋಲಿಸಿ ಸಂಸತ್ ನತ್ತ ಮುಖ ಮಾಡಿದ್ದರು ಕಾಂಗ್ರೆಸ್ ನ ಕೆ.ಹೆಚ್.ಮುನಿಯಪ್ಪ.
Constituency
Status
ಒಟ್ಟು 16,12,227 ರಲ್ಲಿ 8,09,331 ಪುರುಷರು, 8,02,795 ಮಹಿಳೆಯರು ಹಾಗೂ 101 ಇತರೆ ಮತದಾರರಿದ್ದಾರೆ.