(/)
ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯಲ್ಲಿ 2019 ರ ಅಖಾಡದಲ್ಲಿ ಕಾಂಗ್ರೆಸ್‌ಗೆ ಈ ಬಾರಿ ಬಿಜೆಪಿ ಪ್ರಬಲ ಪೈಪೋಟಿ ಒಡ್ಡಿದೆ.
ಮಾಜಿ ಸಿಎಂ ಹಾಗೂ ಕಾಂಗ್ರೆಸ್‌ನ ಎಂ.ವೀರಪ್ಪ ಮೊಯಿಲಿ ಕಾಂಗ್ರೆಸ್ ನಿಂದ ಹಾಗೂ ಬಿಜೆಪಿಯಿಂದ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಕಣದಲ್ಲಿದ್ದಾರೆ.
ಆರಂಭದಿಂದಲೂ ಈ ಕ್ಷೇತ್ರ ಕೈ ಪಡೆಯ ಭದ್ರ ಹಿಡಿತದಲ್ಲಿದೆ. ಆದರೆ ಈಗೀಗ ಬಿಜೆಪಿ ತನ್ನ ನೆಲೆಯನ್ನು ಕಂಡುಕೊಳ್ಳುತ್ತಿದೆ. ಹೀಗಾಗಿ ಬಿಜೆಪಿ ಅಚ್ಚರಿ ನೀಡೋಕೆ ಕಾದಿದೆ.
2014 ರಲ್ಲಿ ಕಾಂಗ್ರೆಸ್ ನ ಎಂ.ವೀರಪ್ಪ ಮೊಯಿಲಿಯವರು ಬಿಜೆಪಿ ಬಿ.ಎನ್.ಬಚ್ಚೇಗೌಡರನ್ನು ಸುಮಾರು 10 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.
ಒಟ್ಟು 17,90,408 ರಲ್ಲಿ 9,02,487 ಪುರುಷರು ಹಾಗೂ 8,87,921 ಮಹಿಳಾ ಮತದಾರರಿದ್ದಾರೆ.