Select Your Language

Notifications

webdunia
webdunia
webdunia
webdunia

ನೀರವ್ ಮೋದಿ, ಲಲಿತ್ ಮೋದಿ, ವಿಜಯ್ ಮಲ್ಯ, ಅಂಬಾನಿ, ಮೋದಿ ಕಳ್ಳರ ಗುಂಪಿನ ಸದಸ್ಯರಂತೆ!

ನೀರವ್ ಮೋದಿ, ಲಲಿತ್ ಮೋದಿ, ವಿಜಯ್ ಮಲ್ಯ, ಅಂಬಾನಿ, ಮೋದಿ ಕಳ್ಳರ ಗುಂಪಿನ ಸದಸ್ಯರಂತೆ!
ಕೋಲಾರ , ಭಾನುವಾರ, 14 ಏಪ್ರಿಲ್ 2019 (16:04 IST)
ನರೇಂದ್ರ ಮೋದಿಯವರೇ ಸುಳ್ಳು ಹೇಳಲಿ. ನಾವು ಸತ್ಯವನ್ನು ಹೇಳುತ್ತೇವೆ. ‌ಮೋದಿ ‌ಹೇಳಿದ ‌ಸುಳ್ಳಿನ ‌ಭರವಸೆಯನ್ನು ಕಾಂಗ್ರೆಸ್ ಸಾಬೀತು ಪಡಿಸಲಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಕೋಲಾರದಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಪರಿವರ್ತನಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು,
ದೇಶವನ್ನು ಒಗ್ಗೂಡಿಸುವ ಕೆಲಸಕ್ಕಾಗಿ ಕಾಂಗ್ರೆಸ್ ಚುನಾವಣೆ ಎದುರಿಸುತ್ತಿದ್ದರೆ, ಪ್ರಧಾನಿಮೋದಿ ಕೇವಲ 15-20  ಜನರಿಗಾಗಿ ದೇಶವನ್ನು ಒಡೆಯುತ್ತಿದ್ದಾರೆ. ಅವರಿಗೋಸ್ಕರ ಚುನಾವಣೆ ನಡೆಸುತ್ತಿದ್ದಾರೆ ಎಂದು‌ಮೋದಿ ವಿರುದ್ಧ ಅವರು ಹರಿಹಾಯ್ದರು.

2014 ರಲ್ಲಿ 15 ಲಕ್ಷ ರೂ. ಬಡವರ ಖಾತೆಗೆ ಹಾಕುವುದಾಗಿ, ಯವಕರಿಗೆ ಉದ್ಯೋಗ ಸೃಷ್ಟಿ, ರೈತರ ಸಾಲಮನ್ನಾ ವಾಗ್ದಾನವನ್ನು ಜನರ ಮುಂದೆ ಇಟ್ಟು ಚುನಾವಣೆ ಎದುರಿಸಿದೆ. ಆದರೆ ಚುನಾವಣೆ ಆದ ಮೇಲೆ 15 ಲಕ್ಷ ಬಡವರ ಖಾತೆಗೆ ಹಾಕುವ ಮಾತು ಬರಿ ಚುನಾವಣೆಗೆ ಮಾತ್ರ ಆಡಿದ ಜುಮ್ಲಾ ಮಾತುಗಳು ಎಂದು ಷಾ ಹೇಳಿದರು. 15 ಲಕ್ಷ ರೂ.‌ ವನ್ನು ಪ್ರತಿಯೊಬ್ಬರ ಖಾತೆಗೆ ಹಾಕುವ ಬಿಜೆಪಿಯ ಸುಳ್ಳಿನ ಮಾತನ್ನು ಕಾಂಗ್ರೆಸ್ ನಿಜಗೊಳಿಸಲು ಮುಂದಾಗಿದೆ. ಮೋದಿ ಹೇಳಿದ ಸುಳ್ಳನ್ನು ಕಾಂಗ್ರೆಸ್ ಸತ್ಯ ಮಾಡಲು ಹೊರಟಿದೆ. ದೇಶದ ಉತ್ತಮ ಆರ್ಥಿಕ ತಜ್ಞರೊಂದಿಗೆ ಈ ಬಗ್ಗೆ ಚರ್ಚಿಸಲಾಯಿತು.‌ ದೇಶದ ಆರ್ಥಿಕ ವ್ಯವಸ್ಥೆಗೆ ನಷ್ಟವಾಗದಂತೆ ಬಡವರ ಖಾತೆಗೆ ಹೇಗೆ ಹಣ ಹಾಕಬಹುದು ಎಂದು ಅವರಲ್ಲಿ ಕೇಳಿದೆ.‌ ಕಾಂಗ್ರೆಸ್ ತೆಗೆದುಕೊಂಡ ಈ ನಿರ್ಣಯ ಒಂದು ಐತಿಹಾಸಿಕ ನಿರ್ಣಯವಾಗಿದೆ ಎಂದರು.

webdunia
ಜನರ ಖಾತೆಗೆ ಮೋದಿ ಸ್ನೇಹಿತ ಅಂಬಾನಿ ಅವರಿಂದಲೇ ಹಣ ಬರುವಂತೆ ಮಾಡಲಾಗುವುದು.‌ ನೂರಕ್ಕೆ ನೂರು ಚೌಕಿದಾರ್ ಚೋರ್. ನೀರವ್ ಮೋದಿ, ಲಲಿತ್ ಮೋದಿ, ವಿಜಯ್ ಮಲ್ಯ, ಅಂಬಾನಿ, ಮೋದಿ ಸೇರಿದಂತೆ ಇವರದ್ದೆಲ್ಲ ಕಳ್ಳರ ಗುಂಪು.‌ ಇವರೆಲ್ಲ ಕಳ್ಳರ ಗುಂಪಿನ ಸದಸ್ಯರು. ದೇಶದ ಕಾರ್ಮಿಕರ, ಬಡವರ ಹಣವನ್ನು ಕದ್ದು ತಮ್ಮ ಗಂಪಿನ ಸದಸ್ಯರಿಗೆ ಮೋದಿ ನೀಡಿದ್ದಾರೆ ಎಂದು ಟೀಕೆ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಐಟಿಯವರಿಗೆ ಮಾನ ಮರ್ಯಾದೆ ಇಲ್ಲದಂತಾಗಿದೆ ಎಂದೋರು ಯಾರು?