Select Your Language

Notifications

webdunia
webdunia
webdunia
webdunia

ಮಕ್ಕಳಿಗಾಗಿ ಸರಳ ರಸಪ್ರಶ್ನೆ

ಮಕ್ಕಳಿಗಾಗಿ ಸರಳ ರಸಪ್ರಶ್ನೆ

ಪ್ರತಿ ಪ್ರಶ್ನೆಯ ಕೆಳಗೆ ನೀಡಿರುವ ನಾಲ್ಕು ಆಯ್ಕೆಗಳಲ್ಲಿ ಒಂದನ್ನು ಆಯ್ದು ಉತ್ತರ ನೀಡಿ.

1. ಈಗಿನ ಭಾರತದ ಪ್ರಧಾನ ಮಂತ್ರಿ ಯಾರು?
ಎ) ವಾಜಪೇಯಿ, ಬಿ) ಎಲ್ ಕೆ. ಅಡ್ವಾಣಿ, ಸಿ) ಅಬ್ದುಲ್ ಕಲಾಂ, ಡಿ) ಮನಮೋಹನ್ ಸಿಂಗ್

2. ನಮ್ಮ ರಾಷ್ಟ್ರಗೀತೆಯನ್ನು ರಚಿಸಿದವರು ಯಾರು ?
ಎ) ಕುವೆಂಪು, ಬಿ) ರವೀಂದ್ರನಾಥ ಠಾಗೋರ್, ಸಿ) ಬಂಕಿಮಚಂದ್ರ ಚಟರ್ಜಿ, ಡಿ) ಅಂಬೇಡ್ಕರ್

3. ಭಾರತದ ರೈಲ್ವೆ ಮಂತ್ರಿ ಯಾರು ?
ಎ) ಶಿವರಾಜ್ ಪಾಟೀಲ್, ಬಿ) ಜಾರ್ಜ್ ಫರ್ನಾಂಡಿಸ್, ಸಿ) ಲಾಲೂ ಪ್ರಸಾದ್ ಯಾದವ್, ಡಿ) ಎ.ಕೆ ಆಂಟನಿ

4. ನಮ್ಮ ರಾಷ್ಟ್ರ ಭಾಷೆ ಯಾವುದು?
ಎ) ಇಂಗ್ಲೀಷ್, ಬಿ) ಬಂಗಾಳಿ, ಸಿ) ಗುಜರಾತಿ, ಡಿ) ಹಿಂದಿ

5. ಸ್ವಾತಂತ್ರ್ಯ ದಿನವನ್ನು ಎಂದು ಆಚರಿಸಲಾಗುತ್ತದೆ?
ಎ) ಜನವರಿ 26, ಬಿ) ಆಗಸ್ಟ್ 15, ಸಿ) ಫೆಬ್ರವರಿ 8, ಡಿ) ಮೇ 15

6. ಭಾರತ ಯಾವ ಖಂಡದಲ್ಲಿದೆ?
ಎ) ಏಷ್ಯಾ, ಬಿ) ಆಸ್ಟ್ರೇಲಿಯಾ, ಸಿ) ಯೂರೋಪ್, ಡಿ) ಯಾವುದೂ ಅಲ್ಲ

7. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದದ್ದು ಯಾವ ವರ್ಷದಲ್ಲಿ?
ಎ) 1950, ಬಿ) 1947, ಸಿ) 1956, ಡಿ) 1946

8. ಅಂಬೇಡ್ಕರ್ ಯಾರು?
ಎ) ಭಾರತದ ಮೊದಲ ಪ್ರಧಾನ ಮಂತ್ರಿ, ಬಿ) ಚಿತ್ರನಟ, ಸಿ) ಸಂವಿಧಾನ ಶಿಲ್ಪಿ, ಡಿ) ಯಾರೂ ಅಲ್ಲ

9. ಯಾರ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ
ಎ) ಮಹಾತ್ಮಾ ಗಾಂಧೀಜಿ, ಬಿ) ರಾಜೇಂದ್ರ ಪ್ರಸಾದ್, ಸಿ) ಸುಭಾಶ್ ಚಂದ್ರ ಭೋಸ್, ಡಿ) ಚಾಚಾ ನೆಹರು

10. ನಮ್ಮ ರಾಷ್ಟ್ರ ದ್ವಜದ ಮಧ್ಯದಲ್ಲಿರುವ ಅಶೋಕ ಚಕ್ರದಲ್ಲಿ ಎಷ್ಟು ಗೆರೆಗಳಿವೆ?
ಎ) 10, ಬಿ) 20, ಸಿ) 23, ಡಿ) 24

ಸರಿಯುತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ .

ಸರಿಯುತ್ತರಗಳು:

1. ಮನಮೋಹನ್ ಸಿಂಗ್
2. ರವೀಂದ್ರನಾಥ ಠಾಗೋರ್
3. ಲಾಲೂ ಪ್ರಸಾದ್ ಯಾದವ್
4. ಹಿಂದಿ
5. ಆಗಸ್ಟ್ 15
6. ಏಷ್ಯಾ
7. 1947
8. ಸಂವಿಧಾನ ಶಿಲ್ಪಿ
9. ಚಾಚಾ ನೆಹರು
10. 24

Share this Story:

Follow Webdunia kannada