ಗುಂಡ ರಾತ್ರಿ ಮಲಗುವಾಗ ಸ್ವಲ್ಪ ಸಕ್ಕರೆ ತಿಂದು ತಲೆದಿಂಬಿನ ಅಡಿಯಲ್ಲೂ ಸ್ವಲ್ಪ ಸಕ್ಕರೆ ಇಟ್ಟುಕೊಂಡು ಮಲಗುತ್ತಿದ್ದ.
ಇದನ್ನು ನೋಡುತ್ತಿದ್ದ ಅವನ ಅಪ್ಪನಿಗೆ ಆಶ್ಚರ್ಯ ತಡೆಯಲಾರದೆ ಯಾಕೆ ಗುಂಡ ತಲೆದಿಂಬಿನಡಿಯಲ್ಲಿ ಸಕ್ಕರೆ ಇಟ್ಟುಕೊಳ್ತೀಯಾ ಎಂದು ಕೇಳಿದ.
ಆಗ ಗುಂಡ, ಪ್ರತಿ ರಾತ್ರಿ ಸಿಹಿ ಕನಸುಗಳೇ ಬೀಳಲಿ ಅಂತ ಹೀಗೆ ಮಾಡುತ್ತಿದ್ದೇನೆ ಅಪ್ಪಾ ಎಂದು ಉತ್ತರಿಸಿದ.