ಸಂತಾನಿಗೆ ಮರುದಿವಸ ಪರೀಕ್ಷೆಯಿತ್ತು. ಅದಕ್ಕಾಗಿ ಎರಡು ಪ್ರಬಂಧಗಳನ್ನು ಕಲಿಯಲು ಕೊಟ್ಟಿದ್ದರು, ಒಂದು ಗೆಳೆಯನ ಬಗ್ಗೆ ಮತ್ತೊಂದು ತಂದೆಯ ಬಗ್ಗೆ. ಸಂತಾನಿಗೆ ಎರಡೂ ಪ್ರಬಂಧಗಳನ್ನು ಕಲಿಯಲು ಕಷ್ಟ ಆದ ಕಾರಣ ಕೇವಲ ಗೆಳೆಯನ ಬಗ್ಗೆ ಮಾತ್ರ ಪ್ರಬಂಧವನ್ನು ಕಲಿತುಕೊಂಡು ಪರೀಕ್ಷೆಗೆ ಹೋದ.
ಆದರೆ ಪರೀಕ್ಷೆಯಲ್ಲಿ ತಂದೆಯ ಬಗ್ಗೆ ಪ್ರಬಂಧ ಬರೆಯಲು ಹೇಳಿದ್ದರು. ಸಂತಾನಿಗೆ ಏನು ಮಾಡಬೇಕೆಂದೇ ತಿಳಿಯಲಿಲ್ಲ ಕೊನೆಗೂ ಯೋಚಿಸಿ ಗೆಳೆಯನ ಬಗ್ಗೆ ಇದ್ದ ಪ್ರಂಬಂಧವನ್ನೇ ಬರೆದ. ಆದರೆ ಗೆಳೆಯ ಬದಲಾಗಿ ತಂದೆ ಎಂದು ಬರೆದ. ಅವನು ಬರೆದ ಪ್ರಬಂಧ ಹೀಗಿತ್ತು." ನನಗೆ ತುಂಬಾ ಜನ ತಂದೆಯಂದಿರು ಇದ್ದಾರೆ. ನನ್ನ ಬೆಸ್ಟ್ ತಂದೆ ಎಂದರೆ ನನ್ನ ನೆರೆಮನೆಯವರು. "