ಕ್ಲಾಸಲ್ಲಿ ಟೀಚರ್ ಎಲೆಕ್ಟ್ರಿಸಿಟಿ ಕುರಿತು ಪಾಠಮಾಡುತ್ತಿರುವಾಗ ಗುಂಡ ಕ್ಲಾಸಲ್ಲಿ ನಿದ್ದೆ ಮಾಡುದನ್ನು ನೋಡಿದ ಟೀಚರ್ ಅವನಲ್ಲಿ ಪ್ರಶ್ನೆಯನ್ನು ಕೇಳುತ್ತಾರೆ
ಟೀಚರ್: ನಾವು ಯಾವುದರ ಕುರಿತು ಪಾಠಮಾಡುತ್ತಿದ್ದೇವೆ?
ಗುಂಡ: ಎಲೆಕ್ಟ್ರಿಕಿಟಿ...
ಟೀಚರ್: ಎಲೆಕ್ಟ್ರಿಕಿಟಿ ಅಲ್ಲ... ಎಲೆಕ್ಟ್ರಿಸಿಟಿ
ಗುಂಡ: ಎಲೆಕ್ಟ್ರಿಕಿಟಿ...
ಟೀಚರ್ ಎಷ್ಟು ಸಲ ಎಲೆಕ್ಟ್ರಿಸಿಟಿ ಎಂದು ಹೇಳಿಕೊಟ್ಟರೂ ಗುಂಡನ ಬಾಯಲ್ಲಿ ಬರುವುದು ಎಲೆಕ್ಟ್ರಿಕಿಟಿ ಅಂತ, ಟೀಚರ್‌ಗೆ ಹೇಳಿ ಹೇಳಿ ಸಾಕಾದಾಗ ಗುಂಡನಲ್ಲಿ ಅವನ ಅಪ್ಪನನ್ನು ಕರೆದುಕೊಂಡು ಬರಲು ತಿಳಿಸುತ್ತಾರೆ.
ಗುಂಡನ ಅಪ್ಪ ಬಂದಾಗ ಅವರಲ್ಲಿ ಈ ವಿಷಯವನ್ನು ತಿಳಿಸುತ್ತಾರೆ.
ಅಪ್ಪ: ಟೀಚರೆ ಅದು ಅವನ ಕೆಪಾಕಿಟಿಯೇ ಅಷ್ಟೇ... ಎಂದು ಹೇಳುತ್ತಾರೆ.
ಕೊನೇಗೆ ಟೀಚರ್ ಗುಂಡನ ತಾತನನ್ನು ಕರೆದುಕೊಂಡು ಬರಲು ತಿಳಿಸುತ್ತಾರೆ. ತಾತ ಬಂದಾಗ ಈ ವಿಚಾರವನ್ನು ತಿಳಿಸುತ್ತಾರೆ.
ತಾತ: ಟೀಚರ್ ಆದದ್ದು ಹಾಗಲಿ ಇದನ್ನು ನೀವು ಪಬ್ಲಿಕಿಟಿ ಮಾಡಬೇಡಿ...