ನಿಸರ್ಗ ರಮಣೀಯತೆಯ ಚಾರ್ಮಾಡಿ ಎಂಬ ಪ್ರಕೃತಿ ವಿಸ್ಮಯ
, ಗುರುವಾರ, 5 ಜನವರಿ 2012 (11:57 IST)
ಒಂದು ಮಾತಿದೆ ಎಲ್ಲಾ ವಸ್ತುಗಳು ಕೃತಕವಾದರೂ ಪ್ರಕೃತಿ ಮಾತ್ರ ದೇವರ ಸೃಷ್ಟಿಯಾಗಿರುತ್ತದೆ ಎಂದು ಹೌದು ಪ್ರಕೃತಿಯ ಮನಮೋಹಕತೆಯನ್ನು ಕಣ್ತುಂಬಿಕೊಳ್ಳದವರು ಯಾರಿದ್ದಾರೆ ಹೇಳಿ? ಒಬ್ಬ ವ್ಯಕ್ತಿ ತನ್ನ ಕೆಲಸದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಹಸಿರು ಹೊದ್ದ ಗಿರಿಶಿಖರಗಳು, ಧೋ ಎಂದು ಲಾಸ್ಯವಾಡುತ್ತಾ ಧುಮ್ಮಿಕ್ಕುವ ಜಲಧಾರೆ ಹೀಗೆ ಪ್ರಕೃತಿಯ ವಿಸ್ಮಯವನ್ನು ನೋಡಿ ಆಹ್ಲಾದಿಸುತ್ತಾನೆ, ಆನಂದಿಸುತ್ತಾನೆ ತನ್ನ ಇರುವಿಕೆಯನ್ನೇ ಮರೆತುಬಿಡುತ್ತಾನೆ. ನಾವೆಲ್ಲಾ ಪ್ರಕೃತಿಯ ಕೂಸಾದ್ದರಿಂದ ಈ ವ್ಯಾಮೋಹ ಯಾರನ್ನೂ ಬಿಟ್ಟಿಲ್ಲ ಬಿಡುವುದೂ ಇಲ್ಲ. ಮನೋಹರ್.ವಿ.ಶೆಟ್ಟಿ ಹೆಬ್ರಿ
ವಿಶ್ವದ ಮೂಲೆ ಮೂಲೆಯಲ್ಲೂ ಈ ನಿಸರ್ಗಸ ಸೋಜಿಗ ಇದ್ದೇ ಇರುತ್ತದೆ. ಅದನ್ನು ನೋಡಿ ನಾವು ಆಹ್! ಓಹ್ ಎಂದು ಉದ್ಗರಿಸುವುದು ನಡೆದೇ ನಡೆಯುತ್ತದೆ. ಇಂತಹ ಒಂದು ನೈಸರ್ಗಿಕ ನೋಟ ಕಾಣಸಿಗುವುದು ಬೆಳ್ತಂಗಡಿ ಗ್ರಾಮದ ಚಾರ್ಮಾಡಿ ಎಂಬ ನಿತ್ಯ ನಿರಂತರ ರಮಣೀಯತೆಯ ಸುಂದರ ಸ್ಥಳದಲ್ಲಿ. ಈ ಮಾರ್ಗವಾಗಿ ಜನಸಾಮಾನ್ಯ ನೂರೆಂಟು ಬಾರಿ ಪ್ರಯಾಣಿಸಿದ್ದರೂ ಅವನಿಗೆ ಈ ಜೀವಂತಿಕೆಯನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗದೇ ಇರಲಾರದು.