Publish Date: Mon, 27 Jun 2016 (11:06 IST)
Updated Date: Mon, 27 Jun 2016 (11:10 IST)
ದಕ್ಷಿಣ ಭಾರತದಲ್ಲಿಯೇ ಅತೀ ಹೆಚ್ಚು ಮಳೆ ಸುರಿಯುವ ಆಗುಂಬೆ ಪ್ರವಾಸಿ ತಾಣ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಈ ಸುಂದರ ಪ್ರವಾಸಿ ತಾಣ ಅರಬ್ಬಿ ಸಮುದ್ರದಲ್ಲಿ ಮುಳುಗುವ ಸೂರ್ಯಾಸ್ಥದ ದೃಶ್ಯಕ್ಕಾಗಿ ಪ್ರಸಿದ್ಧವಾಗಿದೆ.
ಸುಂದರ ಪ್ರವಾಸಿ ತಾಣವಾಗಿರುವ ಆಗುಂಬೆ, ಆಯುರ್ವೇದ ಗಿಡಮೂಲಿಕೆಗಳಿಂದ ಕುಡಿರುವ ಪ್ರದೇಶವಾಗಿರುವುದರಿಂದ ಪ್ರವಾಸಿಗರು ಸ್ವಾಸ್ಥ್ಯವನ್ನು ಸುಧಾರಿಸಿಕೊಳ್ಳಲು ಇಲ್ಲಿ ಆಗಮಿಸುತ್ತಾರೆ.
ಈ ಪ್ರದೇಶ ಭೇಟಿ ನೀಡುವ ಪ್ರವಾಸಿಗರು ಬರ್ಕನ ಜಲಪಾತ, ಕುಂಚಿಕಲ್ ಜಲಪಾತ, ಅಬ್ಬಿ ಫಾಲ್ಸ್, ಜೋಗಿ ಗುಂಡಿ ಮತ್ತು ಕೂಡ್ಲು ತೀರ್ಥ ಜಲಪಾತಗಳನ್ನು ವೀಕ್ಷಿಸಬಹುದಾಗಿದೆ. ಆಗುಂಬೆಯಲ್ಲಿ ಹಲವು ಪ್ರಭೇದದ ಪ್ರಾಣಿ ಮತ್ತು ಸಸ್ಯಗಳು ಕಂಡು ಬರುವುದರಿಂದ ಮೆಲೆನಾಡು ಸಂಶೋಧನಾ ಕೇಂದ್ರವಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.