Publish Date: Thu, 30 Nov 2017 (10:00 IST)
Updated Date: Thu, 30 Nov 2017 (10:02 IST)
ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿ, ಕುಮಾರಸ್ವಾಮಿ ಸಿಎಂ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ಆಪ್ ಆಧಾರಿತ ‘ಟೈಗರ್ ಕ್ಯಾಬ್’ಗೆ ಚಾಲನೆ ನೀಡಿದ ದೇವೇಗೌಡರು,ಇಪ್ಪತ್ತು ತಿಂಗಳು ಸಿಎಂ ಆಗಿ ಜನರ ಮನಸ್ಸು ಗೆದ್ದಿದ್ದ ಕುಮಾರಸ್ವಾಮಿ ಮತ್ತೆ ಸಿಎಂ ಆಗಬೇಕೆಂದು ಜನ ಬಯಸುತ್ತಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಸಿಎಂ ಆಗುವುದು ಶತಸಿದ್ಧ ಎಂದು ದೇವೇಗೌಡರು ಹೇಳಿಕೊಂಡಿದ್ದಾರೆ.
ಹಿಂದಿನ ಸರ್ಕಾರಗಳು ಏನೇನು ಮಾಡಿವೆ ಎಂಬ ಹುಳುಕು ಹೊರ ತೆಗೆಯಲು ಸಕಾಲ ಇದಾಗಿದೆ. ಕುಮಾರಸ್ವಾಮಿ ಸಿಎಂ ಆಗುವುದು ರಾಜ್ಯದ ಜನರು ಕೊಡುವ ಭಾಗ್ಯ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ