Publish Date: Sat, 08 Jul 2017 (09:23 IST)
Updated Date: Sat, 08 Jul 2017 (09:25 IST)
ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಕಾರ್ಯಕ್ರಮವೊಂದರಲ್ಲಿ ಪರೋಕ್ಷವಾಗಿ ಕುಮಾರ ಸ್ವಾಮಿ ವಿರುದ್ಧ ತೊಡೆ ತಟ್ಟಿದ್ದರು ಎನ್ನುವ ವರದಿಯಾಗಿತ್ತು. ಇದಕ್ಕೆ ಜೆಡಿಎಸ್ ನ ಭಿನ್ನಮತ ಶಾಸಕರು ಧ್ವನಿಗೂಡಿಸಿದ್ದಾರೆ.
ಕುಮಾರಸ್ವಾಮಿ ಅಣ್ಣನ ಮಗ ಮೈಸೂರು ರಾಜಕೀಯಕ್ಕೆ ಪ್ರವೇಶಿಸದಂತೆ ತಡೆದಿದ್ದರು ಎಂದು ಆರೋಪ ಕೇಳಿಬಂದಿತ್ತು. ಇದಕ್ಕೆ ಪ್ರಜ್ವಲ್ ರೇವಣ್ಣ ಬಹಿರಂಗವಾಗಿಯೇ ಕಿಡಿ ಕಾರಿದ್ದರು ಎಂದು ವರದಿಯಾಗಿತ್ತು. ನಂತರ ಇದನ್ನು ಪ್ರಜ್ವಲ್ ನಿರಾಕರಿಸಿದ್ದರು. ಆದರೆ ಜೆಡಿಎಸ್ ನ ಉಚ್ಛಾಟಿತ ಶಾಸಕರಾದ ಜಮೀರ್ ಅಹಮ್ಮದ್, ಬಾಲಕೃಷ್ಣ ಪ್ರಜ್ವಲ್ ಮಾತು ನೂರಕ್ಕೆ ನೂರು ನಿಜ ಎಂದಿದ್ದಾರೆ.
ಕುಮಾರಸ್ವಾಮಿ ಸೂಟ್ ಕೇಸ್ ರಾಜಕೀಯ ಮಾಡುವುದರಲ್ಲಿ ಎಕ್ಸ್ ಪರ್ಟ್. ಅಣ್ಣನ ಮಗನ ಏಳಿಗೆಯನ್ನೇ ಸಹಿಸದ ಅವರು, ನಮ್ಮಂತಹವರನ್ನೆಲ್ಲಾ ಬಿಡ್ತಾರಾ? ಟಿಕೆಟ್ ಹಂಚಿಕೆ ಕುರಿತು ದೇವೇಗೌಡ ಒಂದು ರೀತಿ ಮಾತನಾಡಿದರೆ, ಕುಮಾರಸ್ವಾಮಿ ಇನ್ನೊಂದು ರೀತಿ ಮಾತಾಡ್ತಾರೆ. ಪ್ರಜ್ವಲ್ ರೇವಣ್ಣಗೆ ನಮ್ಮ ಬೆಂಬಲವಿದೆ’ ಎಂದು ಭಿನ್ನಮತ ಶಾಸಕರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ