Webdunia - Bharat's app for daily news and videos

Install App

ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲು ಅಭ್ಯರ್ಥಿಗಳ ರೇಸ್‌

geetha
ಮಂಗಳವಾರ, 20 ಫೆಬ್ರವರಿ 2024 (18:44 IST)
ತುಮಕೂರು :ತುಮಕೂರು ಕ್ಷೇತ್ರದಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳ ರೇಸ್‌ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್‌ ಘೋಷಣೆ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್‌ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ಈ ಕುರಿತು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. 
ಜಿಲ್ಲೆಯಿಂದ ಯಾರ ಹೆಸರಿನ ಪಟ್ಟಿಯೂ ಪ್ರತ್ಯೇಕವಾಗಿ ಹೈ ಕಮಾಂಡ್ ಗೆ ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದ ರವಿಶಂಕರ್‌, ಆಕಾಂಕ್ಷಿತರು ತಪ್ಪು ಮಾಹಿತಿಗಳನ್ನು ಮಾಧ್ಯಮಕ್ಕೆ ಕೊಡಬಾರದು ಎಂದು ತಾಕೀತು ಮಾಡಿದರು. 

 ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಕೂಡ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ನುಡಿದ ರವಿಶಂಕರ್‌, ಹಾಗೆಂದು ಪಕ್ಷದ ಚೌಕಟ್ಟು ಬಿಟ್ಟು ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದರು. ಜೊತೆಗೆ, ವಿ.ಸೋಮಣ್ಣರಿಗೆ ಟಿಕೆಟ್ ಕೊಡದಂತೆ ಯಾರೂ ಹೈಕಮಾಂಡ್ ಗೆ ಪತ್ರ ಬರೆದಿಲ್ಲ. ಹೈಕಮಾಂಡ್ ಸೋಮಣ್ಣಗೆ ಟಿಕೆಟ್ ಕೊಟ್ಟರೆ ಕಮಲದ ಚಿಹ್ನೆಗಾಗಿ ಕೆಲಸ ಮಾಡುತ್ತೇವೆ ಎಂದರು. 
 
ಇತ್ತೀಚಿಗಷ್ಟೇ , ಸಿದ್ದಗಂಗಾ ಆಸ್ಪತ್ರೆ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಬಿಜೆಪಿ ಖಜಾಂಚಿ ಡಾ. ಪರಮೇಶ್‌ ತನಗೆ ಬಿಜೆಪಿ ಲೋಕಸಭಾ ಚುನಾವಣೆ ಟಿಕೆಟ್‌ ದೊರೆಯುವುದು ಖಚಿತವಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಷ್ಣವರ್ಧನ್‌ ಸಮಾಧಿ ತೆರವುಗೊಳಿಸಿ ಜಮೀನನ್ನೂ ಮಾರಲು ಹೊರಟ ಬಾಲಣ್ಣನ ಮಕ್ಕಳಿಗೆ ಶಾಕ್‌ ಮೇಲೆ ಶಾಕ್‌

ವ್ಯಕ್ತಿಯಲ್ಲಿ ರಕ್ತ ಮಿಶ್ರಿತ ಕಫ, ಎಕ್ಸರೇ ರಿಪೋರ್ಟ್ ನೋಡಿ ಬೆಚ್ಚಿಬಿದ್ದ ವೈದ್ಯರು

ವಿದ್ಯಾರ್ಥಿನಿ ಶಾಲೆಗೆ ಹೋಗಲು ನಿರಾಕರಣೆ: ಕಾರಣ ಕೇಳಿ ಬೆಚ್ಚಿದ ಪೋಷಕರು

ಚೀನಾದ ಟಿಯಾಂಜಿನ್‌ಗೆ ಆಗಮಿಸಿದ ಪ್ರಧಾನಿ ಮೋದಿಗೆ ಸಿಕ್ತು ಭವ್ಯ ಸ್ವಾಗತ

ಪತ್ನಿ ಸಾವು, ಆಕೆಯ ತಂಗಿಯನ್ನೇ ಮತ್ತೇ ಮದುವೆಯಾದ ಭೂಪನ ಡಿಮ್ಯಾಂಡ್ ಕೇಳಿದ್ರೆ ಶಾಕ್‌

ಮುಂದಿನ ಸುದ್ದಿ
Show comments