Select Your Language

Notifications

webdunia
webdunia
webdunia
webdunia

ರಮೇಶ್ ಕುಮಾರ್ ಮತ್ತು ನಾನು ಗಂಡ ಹೆಂಡತಿ ಇದ್ದಂತೆ ಎಂದ ಮುನಿಯಪ್ಪ ಅವರ ಹೇಳಿಕೆಗೆ ಸ್ಪೀಕರ್ ಹೇಳಿದ್ದೇನು?

ರಮೇಶ್ ಕುಮಾರ್ ಮತ್ತು ನಾನು ಗಂಡ ಹೆಂಡತಿ ಇದ್ದಂತೆ ಎಂದ ಮುನಿಯಪ್ಪ ಅವರ ಹೇಳಿಕೆಗೆ ಸ್ಪೀಕರ್ ಹೇಳಿದ್ದೇನು?
ಕೋಲಾರ , ಶುಕ್ರವಾರ, 22 ಮಾರ್ಚ್ 2019 (08:59 IST)
ಕೋಲಾರ : ರಮೇಶ್ ಕುಮಾರ್ ಮತ್ತು ನಾನು ಗಂಡ ಹೆಂಡತಿ ಇದ್ದಂತೆ ಎಂದ ಮುನಿಯಪ್ಪ ಅವರ ಹೇಳಿಕೆಗೆ ಸ್ಪೀಕರ್ ರಮೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.


‘ಮುನಿಯಪ್ಪ ಅವರಿಗೆ ನನ್ನ ಪಕ್ಕ ಮಲಗಲು ಇಷ್ಟವಿರಬಹುದು, ಆದರೆ ನನಗೆ ಇಷ್ಟವಿಲ್ಲ. ನಾನು ಗಂಡಸರೊಂದಿಗೆ ಮಲಗುವುದಿಲ್ಲ, ನಾನು ನನ್ನ ಮನೆಯಲ್ಲಿ ಮಲಗುವೆ. ಸಪ್ತಪದಿಯೊಂದಿಗೆ ಮದುವೆಯಾಗಿರುವ ನನ್ನ ಪತ್ನಿಯೊಂದಿಗೆ ಸಂಬಂಧವಿದೆ, ಅನೈತಿಕ ಸಂಬಂಧ ಯಾವುದೂ ಇಲ್ಲ’ ಎಂದು ಲೇವಡಿ ಮಾಡಿದ್ದಾರೆ.


‘ಶಾಸನ ಸಭೆಯಲ್ಲಿ ನಾನು ಸ್ಪೀಕರ್ ಒಂದು ರೀತಿ ನಾನು ಜಡ್ಜ್, ಯಾರಿಗೂ ಸಹಮತವೂ ಇಲ್ಲ, ಭಿನ್ನಮತನೂ ಇಲ್ಲ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಎರಡೂ ಕಡೆಯವರು ಸರ್ವಾನುಮತದಿಂದ ನನ್ನ ಆಯ್ಕೆ ಮಾಡಿದ್ದಾರೆ. ನಾನು ಯಾರ ಪರವಾಗಿಯೂ ಇಲ್ಲ. ನಾನು ಸ್ಪೀಕರ್ ಸ್ಥಾನಕ್ಕೆ ಆಯ್ಕೆಯಾದ ಮೇಲೆ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ.


ಚುನಾವಣೆಗೆ ಯಾರನ್ನು ಕಣಕ್ಕಿಳಿಸಬೇಕೆಂದು ಪಕ್ಷದಲ್ಲಿರುವವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ನನಗೆ ಈ ಬಗ್ಗೆ ಗೊತ್ತಿಲ್ಲ. ಸ್ಪೀಕರ್ ಆಗಿರುವುದರಿಂದ ನನ್ನ ಮನಸ್ಸಿನಲ್ಲಿರುವುದನ್ನ ಹೇಳುವುದಕ್ಕೆ ಆಗುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂತಹ ನೋಟುಗಳನ್ನು ಯಾವುದೇ ಕಾರಣಕ್ಕೂ ಬ್ಯಾಂಕುಗಳು ಸ್ವೀಕರಿಸುವುದಿಲ್ಲ-ಆರ್.ಬಿ.ಐ. ಸೂಚನೆ