Publish Date: Tue, 17 May 2022 (20:22 IST)
Updated Date: Tue, 17 May 2022 (20:26 IST)
ಬಾಗಲಕೋಟೆಯಲ್ಲಿ ವಕೀಲೆ ಸಂಗೀತಾ ಶಿಕ್ಕೇರಿ ಮೇಲಿನ ಹಲ್ಲೆ ಪ್ರಕರಣ ತಿರುವು ಪಡೆದುಕೊಂಡಿದೆ. ವಕೀಲೆ ಸಂಗೀತಾ ಮೇಲೆ ಹಲ್ಲೆ ಮಾಡಿದ್ದ ಮಹಾಂತೇಶ್ ಚೊಳಚಗುಡ್ಡಗೆ ವಕೀಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ಈಗ ಬಹಿರಂಗಗೊಂಡಿದೆ.. ಮೇ 14ರಂದು ವೀರಭದ್ರೇಶ್ವರ ಗಿಫ್ಟ್ ಸೆಂಟರ್ ಮಾಲೀಕ ಮಹಾಂತೇಶ ಚೋಳಚಗುಡ್ಡ, ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ರು..ಆದ್ರೆ, ಮಹಾಂತೇಶ್ ಹಲ್ಲೆ ಮಾಡುವುದಕ್ಕಿಂತ ಮುಂಚೆ ಅದೇ ದಿನ ವಕೀಲೆ ಸಂಗೀತಾ, ಮಹಾಂತೇಶ್ ಗಿಫ್ಟ್ ಸೆಂಟರ್ ಬಳಿ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ಇದೀಗ ಲಭ್ಯವಾಗಿದೆ