ವರ್ತೂರ್ ಪ್ರಕಾಶ್ ಕೋಲಾರದಲ್ಲಿ ಬಿಜೆಪಿ ಪರವಾಗಿಯೇ ಪ್ರಚಾರ ಮಾಡಿದ್ದೇನೆ ಎಂದು ಹೇಳಿದರು ಕೂಡ ಅಲ್ಲಿ ಬಿಜೆಪಿಗೆ ಮತ್ತೆ ಸೋಲಾಗಿದೆ.
ಬಿಜೆಪಿ ಸೋಲು ವರ್ತೂರು ಪ್ರಕಾಶ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಪಕ್ಷದ ವರಿಷ್ಠರು ಈಗ ನಿಗಮ ಮಂಡಳಿ ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸುವ ಸಾಧ್ಯತೆ ಇದೆ ಎಂಬ ವದಂತಿ ಕೇಳಿ ಬರತೊಡಗಿದೆ.
ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಕಟ್ಟಾ ಶಿಷ್ಯ ಎಂದೇ ಬಿಂಬಿತವಾಗಿರುವ ವರ್ತೂರ್ ಪ್ರಕಾಶ್ ಬಿಜೆಪಿಯಲ್ಲಿದ್ದರೂ, ಸಾಕಷ್ಟು ಬಾರಿ ಮುಜುಗರದ ಹೇಳಿಕೆ ನೀಡಿ ವಿವಾದಕ್ಕೆ ಎಡೆಯಾಗಿದ್ದರು.
ಆದರೂ ನಂತರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರೇ ತಮ್ಮ ನಾಯಕರು. ಪಕ್ಷೇತರರರಾಗಿರುವ ನಮಗೆ ಯಾವುದೇ ತೊಂದರೆ ಇಲ್ಲ ಎಂಬಂತಹ ಹೇಳಿಕೆ ನೀಡಿದ್ದರು. ಇತ್ತ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಸೂಕ್ತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ ಮೇಲೆ ಸಿದ್ದು ತಣ್ಣಗಾಗಿದ್ದರು. ಇದರಿಂದ ವರ್ತೂರ್‌ಗೆ ಸಾಕಷ್ಟು ಇರಿಸುಮುರಿಸು ಉಂಟಾಗಿತ್ತು. ಇದೀಗ ಬಿಜೆಪಿ ವರ್ತೂರ್ ತಲೆದಂಡ ತೆಗೆದುಕೊಳ್ಳುವುದೇ ಎಂದು ಕಾದುನೋಡಬೇಕು.