Select Your Language

Notifications

webdunia
webdunia
webdunia
webdunia

ಆಸ್ನೋಟಿಕರ್ ಪ್ರಕರಣ: ಎಸಿ ಎತ್ತಂಗಡಿ

ಆಸ್ನೋಟಿಕರ್ ಪ್ರಕರಣ: ಎಸಿ ಎತ್ತಂಗಡಿ
ಕಾರವಾರ , ಬುಧವಾರ, 19 ನವೆಂಬರ್ 2008 (17:32 IST)
ಸಚಿವ ಆನಂದ ಆಸ್ನೋಟಿಕರ್ ಅವರು ಚುನಾವಣೆ ಸಂದರ್ಭದಲ್ಲಿ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡ ಸಹಾಯಕ ಕಮಿಷನರ್‌‌ರನ್ನು ಸರಕಾರ ಎತ್ತಂಗಡಿ ಮಾಡಿದೆ.

ಈ ಪ್ರಕರಣ ಆಡಳಿತರೂಢ ಸರಕಾರಕ್ಕೆ ಇರಿಸು ಮುರಿಸು ತಂದಿತ್ತು. ಅಲ್ಲದೇ ಈಗಾಗಲೇ ಸೇಡಿನ ರಾಜಕಾರಣದ ಅಪವಾದ ಹೊತ್ತಿರುವ ಯಡಿಯೂರಪ್ಪ ಆಡಳಿತ, ಇದೀಗ ಆಸ್ನೋಟಿಕರ್ ಅವರ ವಿರುದ್ಧ ದೂರು ದಾಖಲಿಸಿಕೊಂಡ ಸಹಾಯಕ ಕಮೀಷನರ್ ವಿಜಯ್ ಮಹಾಂತೇಶ್ ಅವರನ್ನು ಸರಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಆಸ್ನೋಟಿಕರ್ ಅವರು ಸುಳ್ಳು ಮಾಹಿತಿ ನೀಡಿದ್ದರ ವಿರುದ್ಧ ತಹಸೀಲ್ದಾರ್ ಮೂಲಕ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿತ್ತು.

ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದ ಪ್ರಕರಣದ ಕುರಿತು ಕಾರವಾರ ಸಿವಿಲ್ ನ್ಯಾಯಾಲಯ ಸಚಿವ ಆಸ್ನೋಟಿಕರ್ ವಿರುದ್ಧ ಜಾಮೀನು ರಹಿತ ವಾರೆಂಟ್ ಕೂಡ ಹೊರಡಿಸಿತ್ತು.

ವಾರೆಂಟ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಕೋರ್ಟ್‌ಗೆ ಹಾಜರಾಗಿ ಕ್ಷಮಾಪಣೆ ಕೇಳಿದ ಬಳಿಕ ನ್ಯಾಯಾಲಯ ಷರತ್ತು ಬದ್ದ ಜಾಮೀನು ನೀಡಿತ್ತು.

Share this Story:

Follow Webdunia kannada