Select Your Language

Notifications

webdunia
webdunia
webdunia
webdunia

ಗ್ರಾಮಸ್ಥರ ಮೇಲೆ ಸಿಇಓ ಸವಾರಿ.. ಕ್ರಮದ ಭರವಸೆ ನೀಡಿದ ಸಿಎಂ

ಗ್ರಾಮಸ್ಥರ ಮೇಲೆ ಸಿಇಓ ಸವಾರಿ.. ಕ್ರಮದ ಭರವಸೆ ನೀಡಿದ ಸಿಎಂ
ರಾಯಚೂರು , ಶುಕ್ರವಾರ, 24 ಮಾರ್ಚ್ 2017 (13:10 IST)
ರಾಯಚೂರು ಜಿಲ್ಲೆಯ ಜಿಲ್ಲಾ ಪಂಚಾಯತ್ ಸಿಇಓ ಅವರನ್ನ ಗ್ರಾಮಸ್ಥರೇ ಎತ್ತುಕೊಂಡು ಕೊಳಚೆ ದಾಟಿದ ಪ್ರಕರಣ ಬೆಳಕಿಗೆ ಬಂದಿದೆ. ಅತ್ಕೂರು ಗ್ರಾಮದಲ್ಲಿ ಕುಡಿಯುವ ನೀರು ಲೀಕ್ ಆಗಿ ಕೊಳಚೆಯಾಗಿತ್ತು. ಕೊಳಚೆ ಇದ್ದ ಕಾರಣ ಟ್ಯಾಂಕ್ ಬಳಿ ತೆರಳಲು ಸಿಇಓ ಕೂರ್ಮಾರಾವ್ ಹಿಂಜರಿದಿದ್ದು, ಬಳಿಕ ಗ್ರಾಮಸ್ಥರೇ ಅವರನ್ನ ಹೊತ್ತು ಕೊಳಚೆ ದಾಟಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಭಾರೀ ಟೀಕೆ ಕೇಳಿಬಂದಿದೆ. ವಿಧಾನಸಭೆಯಲ್ಲೂ ಶಾಸಕ ಮಾನಪ್ಪ ವಜ್ಜಲ್ ವಿಷಯ ಪ್ರಸ್ತಾಪಿಸಿದ್ದು, ಇದೊಂದು ಅಮಾನವೀಯ ಕೃತ್ಯ, ರೈತರಿಗೆ ಮಾಡಿದ ಅಪಮಾನ. ಹೀಗಾಗಿ, ಕೂಡಲೇ  ಸಿಇಓ ಅಮಾನತಿಗೆ ಆಗ್ರಹಿಸಿದ್ದಾರೆ.

ಸಚಿವ ಟಿ.ಬಿ. ಜಯಚಂದ್ರ ವರದಿ ತರಿಸಿಕೊಂಡು ಕ್ರಮ ಜರುಗಿಸುವುದಾಗಿ ತಿಳಿಸಿದರು. ಆದರೆ, ಇದಕ್ಕೆ ವಿಪಕ್ಷಗಳು ಒಪ್ಪದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಕೂಡಲೇ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕದಲ್ಲಿ ಭಾರತ ಮೂಲದ ತಾಯಿ-ಮಗು ಅನುಮಾನಾಸ್ಪದ ಸಾವು