ಭಾರತದ ಮಹಿಳೆಯರು ಹಿಜಾಬ್ ಧರಿಸಲ್ಲ ಅದಕ್ಕೇ ರೇಪ್ ಆಗ್ತವೆ ಎಂದಿದ್ದ ಜಮೀರ್ ಅಹ್ಮದ್

Krishnaveni K
ಸೋಮವಾರ, 19 ಆಗಸ್ಟ್ 2024 (14:03 IST)
ಬೆಂಗಳೂರು: ಭಾರತದಲ್ಲಿ ಮಹಿಳೆಯರು ಹಿಜಾಬ್ ಧರಿಸಲ್ಲ. ಅದಕ್ಕೇ ಇಲ್ಲಿ ರೇಪ್ ಪ್ರಕರಣಗಳು ಹೆಚ್ಚಾಗಿದೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದ ಹಳೇ ಹೇಳಿಕೆಯೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆ ಮೇಲೆ ರೇಪ್ ಪ್ರಕರಣ ದೇಶದಾದ್ಯಂತ ದೊಡ್ಡ ಸುದ್ದಿಯಲ್ಲಿರುವಾಗ ಯಾರೋ ಜಮೀರ್ ಹಳೇ ಹೇಳಿಕೆಯ ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಈ ಹಿಂದೆ ಕರ್ನಾಟಕದಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಯಾದ ಸಂದರ್ಭದಲ್ಲಿ ಜಮೀರ್ ಇಂತಹದ್ದೊಂದು ಹೇಳಿಕೆ ನೀಡಿದ್ದರು.

ಮಾಧ್ಯಮಗಳು ಹಿಜಾಬ್ ನಿಷೇಧದ ಬಗ್ಗೆ ಪ್ರಶ್ನೆ ಮಾಡಿದಾಗ ಹಿಜಾಬ್ ಧರಿಸಿದರೆ ಮಹಿಳೆಯರ ಮೇಲೆ ಅತ್ಯಾಚಾರವಾಗಲ್ಲ ಎಂದಿದ್ದರು. ಆಗ ಜಮೀರ್ ಹೇಳಿಕೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಹಿಜಾಬ್ ಧರಿಸುವುದರಿಂದ ಮಹಿಳೆಯರ ಮೇಲೆ ರೇಪ್ ಆಗಲ್ಲ. ಇದು ಅವರ ಸೌಂದರ್ಯ ಮರೆಮಾಚುವುದರಿಂದ ಪರದೆಯಂತೆ ಕೆಲಸ ಮಾಡುತ್ತದೆ ಎಂದು ಜಮೀರ್ ಹೇಳಿದ್ದರು.

ಅವರ ಅಂದಿನ ಹೇಳಿಕೆಯನ್ನು ಈಗ ಮತ್ತೆ ಹಂಚಿಕೊಂಡಿರುವ ನೆಟ್ಟಿಗರೊಬ್ಬರು ಜಮೀರ್ ಅಂದು ಹೇಳಿದ್ದು ನಿಜ ಎಂದು ಸಮರ್ಥಿಸಿಕೊಂಡಿದ್ದಾರೆ. ಈಗ ದೇಶದಲ್ಲಿ ನಡೆದ ವೈದ್ಯೆಯ ಮೇಲಿನ ರೇಪ್ ಪ್ರಕರಣ ದೊಡ್ಡಮಟ್ಟದಲ್ಲಿ ಸುದ್ದಿಯಾಗಿರುವಾಗ ಜಮೀರ್ ಅಂದಿನ ಹೇಳಿಕೆಯನ್ನು ನೆಟ್ಟಿಗರು ನೆನಪಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ದೆಹಲಿ ಸ್ಪೋಟ ನಡೆಸಿದ ವ್ಯಕ್ತಿಯ ಬಗ್ಗೆ ಸ್ಪೋಟಕ ಮಾಹಿತಿ ಲಭ್ಯ

ದೆಹಲಿಯಲ್ಲಿ ಸ್ಪೋಟದ ಬೆನ್ನಲ್ಲೇ ಬೆಂಗಳೂರಲ್ಲಿ ಕಟ್ಟೆಚ್ಚರ: ಸಿಎಂ ಮಹತ್ವದ ಸಂದೇಶ

ಮೋದಿ ಭೂತಾನ್ ಪ್ರವಾಸ: ದೆಹಲಿಯಲ್ಲಿ ಸ್ಪೋಟವಾಗಿರುವಾಗ ವಿದೇಶ ಯಾತ್ರೆ ಬೇಕಿತ್ತಾ ಎಂದ ನೆಟ್ಟಿಗರು

ದೆಹಲಿ ಸ್ಪೋಟ ಬೆನ್ನಲ್ಲೇ ಶುರುವಾಯ್ತು ಕಾರಣ ಯಾರು ಶುರುವಾಯ್ತು ಕೆಸರೆರಚಾಟ

ಮುಂದಿನ ಸುದ್ದಿ
Show comments