Select Your Language

Notifications

webdunia
webdunia
webdunia
webdunia

ಅಲ್ಲಾ ಮೇಲೆ ಆಣೆ ಮಾಡಿ ಹೇಳ್ತೇನೆ, ಕಾಂಗ್ರೆಸ್‌ಗೆ ಮತ ಹಾಕುವಂತೆ ಎಚ್‌ಡಿಕೆ ಹೇಳಿದ್ರು: ಜಮೀರ್

ಅಲ್ಲಾ ಮೇಲೆ ಆಣೆ ಮಾಡಿ ಹೇಳ್ತೇನೆ, ಕಾಂಗ್ರೆಸ್‌ಗೆ ಮತ ಹಾಕುವಂತೆ ಎಚ್‌ಡಿಕೆ ಹೇಳಿದ್ರು: ಜಮೀರ್
ಮಂಡ್ಯ , ಶುಕ್ರವಾರ, 14 ಏಪ್ರಿಲ್ 2017 (14:12 IST)
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕುವಂತೆ ಕುಮಾರಸ್ವಾಮಿ ಆದೇಶ ನೀಡಿದ್ದರು. ಇದನ್ನು ನಾನು ಅಲ್ಲಾ ಮೇಲೆ ಆಣೆ ಮಾಡಿ ಹೇಳ್ತೇನೆ. ಕುಮಾರಸ್ವಾಮಿಯವರೂ ದೇವರ ಮೇಲೆ ಆಣೆ ಮಾಡಲಿ ಎಂದು  ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್ ಖಾನ್ ಸವಾಲ್ ಹಾಕಿದ್ದಾರೆ.
 
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ನಾವು ಎಚ್.ಡಿ.ದೇವೇಗೌಡರಲ್ಲ ಎಂದು ಹೇಳಿದ್ದಾರೆ.
 
ಚಲುವರಾಯ ಸಮಾವೇಶದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬೇಕು ಎಂದಾಗ ದೇವೇಗೌಡರು ವಿರೋಧಿಸಿದ್ದರು. ಆದರೆ, ನಾವೆಲ್ಲರು ಕುಮಾರಸ್ವಾಮಿಯವರು ಸಿಎಂ ಆಗಲೇಬೇಕು ಎಂದು ಪಟ್ಟು ಹಿಡಿದಿದ್ದೇವು ಎಂದು ತಿಳಿಸಿದ್ದಾರೆ.
 
ಇದೀಗ ಕುಮಾರಸ್ವಾಮಿ ಮತ್ತು ದೇವೇಗೌಡರು ನಮ್ಮನ್ನು ದೂರವಿಡುತ್ತಿದ್ದಾರೆ. ನಾವು ಯಾವುದೇ ತಪ್ಪು ಮಾಡಿಲ್ಲ. ಅವರು ಹೇಳಿದಂತೆ ಕೇಳಿದ್ದೇವೆ. ಅವರ ಮಾತನ್ನು ಮೀರಿಲ್ಲ ಎಂದರು.
 
ಜೆಡಿಎಸ್ ಬಂಡಾಯ ಶಾಸಕರಿಗೆ ಪಕ್ಷದ ಬಾಗಿಲು ಬಂದ್ ಆಗಿದೆ ಎಂದು ದೇವೇಗೌಡರು ಹೇಳುತ್ತಿದ್ದಾರೆ. ನಾವೂ ಬೇರೆ ಪಕ್ಷವನ್ನು ಹುಡುಕಿಕೊಂಡು ಹೋಗುತ್ತೇವೆ. ಯಾರು ಯಾರಿಗೂ ಅನಿವಾರ್ಯವಲ್ಲ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹೇಮಾಮಾಲಿನಿ ಪ್ರತಿನಿತ್ಯ ಮದ್ಯ ಸೇವಿಸ್ತಾರೆ, ಆತ್ಮಹತ್ಯೆಗೆ ಶರಣಾಗಿದ್ದಾರಾ: ಮಹಾರಾಷ್ಟ್ರ ಶಾಸಕ