ಮೈಸೂರಿನ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ವೀಕೆಂಡ್ ಸಫಾರಿಗೆ ಹೋದವರಿಗೆ ಸಕತ್ತ್ ಕಿಕ್ ಸಿಕ್ತಿದೆ. ಪ್ರಸಿದ್ದ ಕಾಕನಕೋಟೆ ಕಾಡಿನ ಸಫಾರಿಗೆ ಬರುವ ಪ್ರವಾಸಿಗರಿಗೆ , ಪ್ರತಿ ಟ್ರಿಪ್‌ನಲ್ಲೂ ಕನಿಷ್ಠ ಐದಾರು ಹುಲಿಗಳು ಕಾಣಿಸಿಕೊಂಡು ಮುದ ನೀಡುತ್ತಿವೆ. ಅತೀ ಸಮೀಪದಲ್ಲೇ ವ್ಯಾಘ್ರಗಳನ್ನು ಪ್ರವಾಸಿಗರು ರೊಮಾಂಚನಗೊಳ್ತಿದ್ದಾರೆ. ಶನಿವಾರ ಮೈಸೂರು -ಮಾನಂದವಾಡಿ ಹಳೆ ರೋಡ್ ನಲ್ಲಿ 6 ಹುಲಿಗಳು ಸ್ವಚ್ಛಂದವಾಗಿ ವಿಹರಿಸಿದ್ವು. ಹೆಚ್. ಕೋಟೆ ದಮ್ಮನಕಟ್ಟೆ ಹೆಚ್ಚು ಹುಲಿಗಳು ಇರುವ ಕಾಕನಕೋಟೆ ಕಾನನವಾಗಿದೆ. ಇನ್ನು ಕೊಡಗು ಜಿಲ್ಲೆ ಕಾಫಿ ತೋಟದಲ್ಲಿ ಭಾರೀ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿಯಲಾಗಿದೆ. ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ತೂಪನಕೊಲ್ಲಿ ಎಸ್ಟೇಟ್ ನಲ್ಲಿ ಸುಮಾರು 13 ಅಡಿ ಉದ್ದ 40 ಕೆಜಿ ತೂಕದ ಹೆಬ್ಬಾವು ಕಾಣಿಸಿಕೊಂಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಹಾವನ್ನು ರಕ್ಷಣೆ ಮಾಡಲಾಗಿದೆ.