Select Your Language

Notifications

webdunia
webdunia
webdunia
webdunia

ಟೀ ಕುಡಿಯೋಕೆ ಹಾವು ತಂದ ಯುವಕ

ಟೀ ಕುಡಿಯೋಕೆ ಹಾವು ತಂದ ಯುವಕ
ವಿಜಯಪುರ , ಸೋಮವಾರ, 23 ಏಪ್ರಿಲ್ 2018 (13:14 IST)
ಜೀವಂತ ಹಾವಿನ ಸಮೇತ ಟೀ ಕುಡಿಯಲು ಬಂದ ಯುವಕ ಎಲ್ಲರ ಕುತೂಹಲಕ್ಕೆ ಕೆಲಕಾಲ ಕಾರಣನಾಗಿದ್ದಾನೆ. ಯುವಕನ ಕೈಯಲ್ಲಿ ಹಾವು ಕಂಡು ಸಾರ್ವಜನಿಕರು ಕಕ್ಕಾಬಿಕ್ಕಿಯಾದ ಘಟನೆ ನಡೆದಿದೆ. 
ವಿಜಯಪುರ ನಗರದ ರಜಪೂತ ಗಲ್ಲಿ ಬಳಿ ಈ ಘಟನೆ ನಡೆದಿದೆ. ಶೇಖರ್ ಎಂಬಾತನೇ ಹಾವು ಹಿಡಿದುಕೊಂಡು ಟೀ ಕುಡಿಯಲು ಬಂದ ಯುವಕನಾಗಿದ್ದಾನೆ. ರಜಪೂತ ಗಲ್ಲಿಯ ಮನೆಯೊಂದರಲ್ಲಿ ಕೇರೆ ಹಾವು ಕಾಣಿಸಿಕೊಂಡಿತ್ತು. ಅಲ್ಲಿನ ಹಾವು ಹಿಡಿದುಕೊಂಡು ನೇರವಾಗಿ ಟೀ ಶಾಫ್ ಗೆ ಶೇಖರ್ ಬಂದಿದ್ದ. ಹೀಗಾಗಿ ಟೀ ಶಾಫ್ ಗೆ ಬಂದಿದ್ದ ಜನ ಗಾಬರಿಗೊಂಡರು. 
 
ಹಾವು ಹಿಡಿದುಕೊಂಡೆ ಟೀ ಕುಡಿದು ನಂತರ ಹೊರವಲಯಕ್ಕೆ ಹಾವು ಬಿಟ್ಟು ರಕ್ಷಣೆ ಮಾಡಲಾಯಿತು. ಕಳೆದ ಹಲವು ವರ್ಷಗಳಿಂದ ಶೇಖರ್  ಹಾವು ಹಿಡಿಯುತ್ತಿದ್ದಾನೆ‌ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿರುವ ರಾಹುಲ್ ಗಾಂಧಿ