Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಪೇಪರ್‌ಗಳನ್ನು ಮುಂದೆ ಇಡ್ತೀವಿ : ಕುಮಾರಸ್ವಾಮಿ

ಬಿಬಿಎಂಪಿ ಪೇಪರ್‌ಗಳನ್ನು ಮುಂದೆ ಇಡ್ತೀವಿ : ಕುಮಾರಸ್ವಾಮಿ
ಬೆಂಗಳೂರು , ಮಂಗಳವಾರ, 15 ಆಗಸ್ಟ್ 2023 (13:32 IST)
ಬೆಂಗಳೂರು : ಇನ್ನೆರಡು ದಿನಗಳಲ್ಲಿ ಬಿಬಿಎಂಪಿ ಪೇಪರ್ಗಳನ್ನು ಮುಂದೆ ಇಡುತ್ತೇವೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
 
77ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಹೆಚ್ಡಿಕೆ, ಮಂತ್ರಿಗಳು ಹೇಳ್ತಾರೆ ಹೊಸ ಟೆಂಡರ್ ಕೊಟ್ಟಿಲ್ಲ ಅಂತಾ. ನಾವು ಹೇಳ್ತಾ ಇರೋದು ಹಳೆಯ ಟೆಂಡರ್ ವಿಚಾರನೆ. ಅದನ್ನು ಯಾಕೆ ಕೊಟ್ಟಿಲ್ಲ ಅಂತ ಕೇಳ್ತಾ ಇದ್ದೀವಿ. ಇನ್ನೊಂದು ಎರಡು ದಿನ ಬಿಬಿಎಂಪಿ ಪೇಪರ್ಗಳು ಇವೆ. ಅವುಗಳನ್ನು ಮುಂದೆ ಇಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ನಾನು ವಿರೋಧ ಪಕ್ಷವಾಗಿ ಕೆಲಸ ಮಾಡ್ತಾ ಇದ್ದೀನಿ. ಅದಕ್ಕೆ ಜಾತಿ ರಕ್ಷಣೆ ಪಡೆಯೋದು, ಕುಮಾರಸ್ವಾಮಿ ಜಾತಿ ಬಗ್ಗೆ ಮಾತಾಡ್ತಾರೆ ಅನ್ನೋದು. ನನಗೆ ಹೊಟ್ಟೆ ಉರಿ ಅಂತಾರೆ. ಜನ ನಿಮ್ಮನ್ನು ನಂಬಿ ಮತ ಹಾಕಿದ್ದಾರೆ. ನಾನು ವಿರೋಧ ಪಕ್ಷವಾಗಿ ಕೆಲಸ ಮಾಡ್ತಾ ಇದ್ದೀನಿ. ವಿದೇಶದಲ್ಲಿ ಪರ್ಮನೆಂಟ್ ಆಗಿ ಕೂರಲು ಹೋಗಿರಲಿಲ್ಲ. ನಾನು ಹಳ್ಳಿ ಮಗನೇ. ಪ್ರಪಂಚ ಹೇಗಿದೆ ಎಂದು ನೋಡಲು ಹೋಗಿದ್ದೆ ಎಂದು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಲೋಕಸಭೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಮೋದಿ