Publish Date: Thu, 14 Mar 2024 (13:24 IST)
Updated Date: Thu, 14 Mar 2024 (13:27 IST)
Photo Courtesy: Instagram
ಬೆಂಗಳೂರು: ಕನ್ನಡಿಗರನ್ನು ರೇಸಿಸ್ಟ್ ಗಳು ಎಂದು ಹಿಂದಿ ಭಾಷಿಕ ಯೂ ಟ್ಯೂಬರ್ ಶ್ರಿಂಕಾಲ್ ಎಂಬಾತ, ಕನ್ನಡಿಗರಿಗೆ ಸವಾಲನ್ನೂ ಹಾಕಿ ವಿವಾದ ಸೃಷ್ಟಿಸಿದ್ದಾನೆ.
ಎಸ್ ಆರ್ ಪೆ ಹೆಸರಿನ ಯೂ ಟ್ಯೂಬ್ ಚಾನೆಲ್ ಹೊಂದಿರುವ ಶ್ರಿಂಕಾಲ್ ಎಂಬಾತ ಕೆಲವು ತಿಂಗಳ ಹಿಂದೆ ವಿಡಿಯೋವೊಂದರಲ್ಲಿ ತನ್ನ ಗೆಳೆಯರೊಂದಿಗೆ ಕನ್ನಡಿಗರನ್ನು ತಮಾಷೆ ಮಾಡುತ್ತಾನೆ. ಮುಂಬೈನಲ್ಲಿ ನೆಲೆಸಿರುವವರನ್ನು ಮುಂಬೈಕರ್ ಎಂದರೆ ಕನ್ನಡಿಗರನ್ನು ಏನೆಂದು ಕರೆಯಬೇಕು ಎಂದು ಗೆಳೆಯರು ಕೇಳಿದಾಗ ಆತ ರೇಸಿಸ್ಟ್ ಗಳು ಎಂದಿದ್ದಾನೆ.
ಈತನ ವಿರುದ್ಧ ಆಗಲೇ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ ಆತನ ದುರಂಹಕಾರ ಕಡಿಮೆಯಾಗಿಲ್ಲ. ಮತ್ತೊಂದು ವಿಡಿಯೋ ಪ್ರಕಟಿಸಿ ಅಪಾಲಿಜಿಸ್ ಟು ಕನ್ನಡಿಗ ಎಂದು ಥಂಬ್ ನೈಲ್ ಹಾಕಿ ಮತ್ತೊಂದು ವಿಡಿಯೋ ಹರಿಯಬಿಟ್ಟಿದ್ದ. ಇದರಲ್ಲಿ ಮಾರ್ಚ್ 15 ರಂದು ಬೆಂಗಳೂರಿನ ಒರಿಯಾನ್ ಮಾಲ್ ಗೆ ಬರುತ್ತೇನೆ ಎಂದು ಸವಾಲು ಹಾಕಿದ್ದಾನೆ.
ಈತನ ಈ ವಿಡಿಯೋ ಕೂಡಾ ವೈರಲ್ ಆಗಿದ್ದು, ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡಿಗರು ಸಹಿಷ್ಣುಗಳು ಎನ್ನುವುದಕ್ಕೆ ಬೆಂಗಳೂರಿನಲ್ಲಿರುವ ಅನೇಕ ರಾಜ್ಯದ, ಅನೇಕ ಭಾಷೆ ಮಾತನಾಡುವ ಜನರೇ ಸಾಕ್ಷಿ. ನಿನ್ನಂತಹವರಿಗೆ ಕನ್ನಡಿಗರು ತಕ್ಕ ಪಾಠ ಕಲಿಸಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.