Daily Horoscope
✕

ನೀವು ನಮ್ಮ ಜತೆಯಿರಬೇಕು, ಈಶ್ವರಪ್ಪ ಇನ್ನೂ ಕಾಲ ಮಿಂಚಿಲ್ಲ ವಾಪಾಸ್ ಬನ್ನಿ: ವಿಜಯೇಂದ್ರ

Sampriya
ಭಾನುವಾರ, 7 ಏಪ್ರಿಲ್ 2024 (12:50 IST)
Photo Courtesy X
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಲು ಪಕ್ಷದ ಹಿತದೃಷ್ಟಿಯಿಂದ ಕೆ.ಎಸ್.ಈಶ್ವರಪ್ಪ ಅವರು ನಮ್ಮೊಂದಿಗೆ ಕೈಜೋಡಿಸಬೇಕು. ಈಗಲೂ ಕಾಲ ಮಿಂಚಿಲ್ಲ. ವಾಪಸ್ ಬನ್ನಿ  ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈಶ್ವರಪ್ಪ ನೀವು ಬಿಜೆಪಿಯ ಹಿರಿಯರು. ರಾಜ್ಯದಲ್ಲಿ ಬಿಜೆಪಿ ಕಟ್ಟಲು ನಿಮ್ಮದೂ ದೊಡ್ಡ ಪಾಲಿದೆ. ಯಾವುದೋ ಪರಿಸ್ಥಿತಿ, ತಪ್ಪು ಸಂದರ್ಭ ತಮ್ಮನ್ನು ಈ ಸನ್ನಿವೇಶಕ್ಕೆ ದೂಡಿದೆ. ಕಾಲ ಮಿಂಚಿಲ್ಲ ವಾಪಸ್ ಬನ್ನಿ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.

ಈಶ್ವರಪ್ಪ ಅವರಿಗೆ ಸಮಸ್ಯೆ ಇದ್ದರೆ ದೆಹಲಿ ನಾಯಕರ ಜೊತೆ ಮಾತನಾಡಲಿ. ನಾವು ಅವರ ಜತೆ‌ ಇರುತ್ತೇವೆ. ಅವರೂ ನಮ್ಮ ಜೊತೆ ಇರಬೇಕು ಎಂಬುದು ಆಸೆ ಎಂದು ಬಿ ವೈ ವಿಜಯೇಂದ್ರ ಅವರು ಮತ್ತೇ ಒಲವು ತೋರಿದರು.

ಪ್ಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಕಾಂಗ್ರೆಸ್ ‌ಪಕ್ಷವನ್ನು ನಿದ್ರೆಗೆಡಿಸಿದೆ. ನರೇಂದ್ರ ಮೋದಿ ಪ್ರತಿ ಕುಟುಂಬಕ್ಕೆ ಐದು ಕೆ.ಜಿ ಅಕ್ಕಿ ಕೊಡುತ್ತಿದ್ದಾರೆ. ರೈತರಿಗೆ ಕಿಸಾನ್ ಸಮ್ಮಾನ್ ಕೊಡುತ್ತಿದ್ದಾರೆ ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments