Webdunia - Bharat's app for daily news and videos

Install App

ಕಾಸು ಕೊಟ್ರೆ ಸಿಗುತ್ತೆ ಉಡೀಸ್ ರೂಂ

Webdunia
ಶನಿವಾರ, 18 ಫೆಬ್ರವರಿ 2023 (14:26 IST)
p
ನಿಮ್ಗೆ ಯಾರ ಮೇಲಾದ್ರೂ ತುಂಬಾ ಕೋಪ ಬಂದಾಗ ಏನ್ ಮಾಡ್ತೀರಾ? ಕೂಗಾಡ್ತೀರಾ, ಜಗಳ ಮಾಡ್ತೀರಾ, ಅಕ್ಕಪಕ್ಕದಲ್ಲಿರೋ ವಸ್ತುಗಳನ್ನ ಒಡೆದು ಹಾಕಿ ಕೋಪ ತಣ್ಣಗೆ ಮಾಡ್ಕೋತೀರಾ. ಆಮೇಲೆ ಅಯ್ಯೋ ಒಡೆದೋಯ್ತಲ್ಲಪ್ಪಾ ಅಂದಿರ್ತಿರಾ ಅಲ್ವಾ? ಇನ್ಮುಂದೆ ನೀವು ಸಿಟ್ಟಲ್ಲಿ ಕಂಡ ಕಂಡ ವಸ್ತುಗಳನ್ನ ಒಡೆದಾಕ್ಬೇಕು ಅಂತಿದ್ರೆ, ಬಸವನಗುಡಿಗೆ ಬರ್ಲೇಬೇಕು.
 
ಸಿಕ್ಕಾ ಪಟ್ಟೆ ಕೋಪ ಬಂದಾಗ ಕೈಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಒಡೆದು ಹಾಕುವವರಿಗಂತಲೇ ಫಾರಿನ್ ಕಂಟ್ರಿಗಳಲ್ಲಿ ರೇಜ್ ರೂಂ ಅನ್ನುವ ಕಾನ್ಸೆಪ್ಟ್ ಈಗಾಗಲೇ ಜಾರಿಯಲ್ಲಿತ್ತು. ಆದ್ರೇ ಇದೀಗ ಬೆಂಗಳೂರಿನಲ್ಲೂ ಈ ಒಂದು ಕಾನ್ಸೆಪ್ಟ್ ಶುರುವಾಗಿದೆ. 
 
ಹೌದು 2008 ರಲ್ಲಿ ಜಪಾನ್ ನಲ್ಲಿ  ಪ್ರಾರಂಭವಾದ ಈ ರೇಜ್ ರೂಮನ್ನ ಫೆ. 4 ರಿಂದ ಬೆಂಗಳೂರಿನ  ಬಸವನಗುಡಿಯಲ್ಲಿ ಪ್ರಾರಂಭಿಸಲಾಗಿದೆ. 99 ರೂಪಾಯಿಗಳಿಗೆ  ಬಿಯರ್ ಬಾಟಲ್, ಇಟ್ಟಿಗೆ, ಥರ್ಮಾಕೋಲ್, ಸ್ಟೀಲ್ ಐಟಮ್, ಪ್ಲೈವುಡ್ ಶೀಟ್ ಗೆ ಒಂದು ರೇಟ್ ಆದ್ರೆ. ಇನ್ನೂ ಸ್ವಲ್ಪ ಜಾಸ್ತಿ ದುಡ್ಡು ಅಂದ್ರೆ 3 ಸಾವಿರ ರುಪಾಯಿ ಕೊಟ್ರೆ ಫ್ರಿಡ್ಜ್, ವಾಶಿಂಗ್ ಮಶೀನ್, ಟಿವಿ, ಮಿಕ್ಸಿಯನ್ನ ಕ್ಷಣಾರ್ಧದಲ್ಲೇ ಒಡೆದು ಹಾಕ್ ಬೋದು.ಇದು ಮಾನಸಿಕವಾಗಿ  ಒತ್ತಡದಲ್ಲಿದವರಿಗೆ ಸಹಾಯಕ ಅಂತಾರೆ ರೇಜ್ ರೂಮ್ ಪ್ರಾರಂಭಿಸಿದ ಅನನ್ಯ ಶೆಟ್ಟಿ
 
ಒಟ್ಟಾರೆ ಈಗಿನ ಬ್ಯುಸಿ ಲೈಫಲ್ಲಿ ಸಾಕಷ್ಟು ಮಂದಿ ಒತ್ತಡದಲ್ಲಿದ್ದು, ಅದನ್ನ ಹೊರ ಹಾಕೋದಕ್ಕೆ ಬೆಂಗಳೂರಿನ ಬಸವನಗುಡಿಯಲ್ಲಿ ಈ ವಿಭಿನ್ನ ಪ್ರಯತ್ನವನ್ನ ಮಾಡಲಾಗಿದೆ. ಜನರೂ ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಈ ರೇಜ್ ರೂಮ್ಗಳಿಗೆ ಭೇಟಿ ನೀಡುತ್ತಿದ್ದು, ತಮ್ಮ ಒತ್ತಡ, ಕೋಪ ಹಾಗು ಮಾನಸಿಕ ಹತಾಶೆಗೆ ಪರಿಹಾರ ಕಂಡು ಕೊಳ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments