ಯಶವಂತಪುರದ ಕೃಷಿ ಉತ್ವನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕಳೆದ ಹದಿನೈದು ದಿನಗಳಿಂದ ತ್ಯಾಜ್ಯ ವಿಲೇವಾರಿ ಮಾಡದ ಕಾರಣ ಇಡೀ ಮಾರುಕಟ್ಟೆ ಗಬ್ಬೆದ್ದು ಹೋಗಿದೆ. ರಾಜ್ಯದ ವಿವಿದ ಭಾಗಗಳಿಂದ ಪ್ರತಿದಿನ ನೂರಾರು ವಾಹನಗಳಲ್ಲಿ ಈರುಳ್ಳಿ ಆಲೂಗಡ್ಡೆ ಸೇರಿದಂತೆ ವಿವಿದ ತರಾಕಾರಿಗಳು ಮಾರುಕಟ್ಟೆಗೆ ಬರುತ್ತವೆ .ಸಗಟು ವ್ಯಾಪಾರಿಗಳಿಗೆ ಮಾರಾಟವಾದ ಬಳಿಕ ಪ್ರತಿದಿನ 5 ಟನ್ ಗೂ ಹೆಚ್ಚು ತ್ಯಾಜ್ಯ ಉತ್ವಾದನೆ ಯಾಗುತ್ತಿದೆ, ಇಡೀ ಮಾರಿಕಟ್ಟೆ ಕಸ ದಿಂದ ಗಬ್ಬೆದ್ದು ನಾರುತ್ತಿದೆ. ಇನ್ನು ಮಾರಿಕಟ್ಟೆಯಲ್ಲಿ ವ್ಯಾಪಾರ ಮಾಡುವವರು ಬಿಬಿಎಂಪಿ ವಿರುದ್ದ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.