Webdunia - Bharat's app for daily news and videos

Install App

ಅಗಲಿದ ವಸಂತ ಬಂಗೇರ ಜತೆಗಿನ ಹೋರಾಟದ ನೆನಪನ್ನು ಸ್ಮರಿಸಿಕೊಂಡ ಯಡಿಯೂರಪ್ಪ

Sampriya
ಬುಧವಾರ, 8 ಮೇ 2024 (19:00 IST)
‌‌
Photo Courtesy X
ಬೆಂಗಳೂರು: ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನರಾದ ಬೆಳ್ತಂಗಡಿ ಮಾಜಿ ಶಾಸಕ ಕೆ ವಸಂತ ಬಂಗೇರ ಅವರ ಅಗಲಿಕೆಗೆ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ತೀವ್ರ ಸಂತಾಪ ಸೂಚಿಸಿದ್ದಾರೆ.

ಎಕ್ಸ್‌ನಲ್ಲಿ ಬರೆದುಕೊಂಡಿರುವ ಬಿಎಸ್‌ವೈ ಅವರು, ಅನೇಕ ವರ್ಷಗಳ ಹಿಂದೆ ವಿಧಾನಸಭೆಯಲ್ಲಿ ನಾನು ಮತ್ತು ವಸಂತ ಬಂಗೇರ ಮಾತ್ರ ಪಕ್ಷದಿಂದ ಶಾಸಕರಾಗಿ ಗೆದ್ದು ಬಂದ ಹೋರಾಟದ ಕ್ಷಣಗಳನ್ನು ಸ್ಮರಿಸಿಕೊಂಡರು.

ಎಕ್ಸ್‌ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ನಾಯಕರಾಗಿ, ಐದು ಬಾರಿ ಬೆಳ್ತಂಗಡಿಯಿಂದ ಶಾಸಕರಾಗಿ ಆಯೆಯಾಗಿದ್ದ ಶ್ರೀ ಕೆ.ವಸಂತ ಬಂಗೇರ ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಅನೇಕ ವರ್ಷಗಳ ಹಿಂದೆ ವಿಧಾನಸಭೆಯಲ್ಲಿ ನಾನು ಮತ್ತು ಶ್ರೀ ವಸಂತ ಬಂಗೇರ ಮಾತ್ರ ಪಕ್ಷದಿಂದ ಶಾಸಕರಾಗಿ ಗೆದ್ದ ಸಂದರ್ಭದ ಆ ಹೋರಾಟದ ದಿನಗಳನ್ನು ನಾನೆಂದಿಗೂ ಮರೆಯಲಾರೆ. ಆ ಹಿರಿಯ ಚೇತನಕ್ಕೆ ಸದ್ಗತಿ ಪ್ರಾರ್ಥಿಸುತ್ತಾ ಅವರ ಕುಟುಂಬದವರಲ್ಲಿ ನನ್ನ ತೀವ್ರ ಸಂತಾಪಗಳನ್ನು ಸಲ್ಲಿಸುತ್ತೇನೆ. ಓಂ ಶಾಂತಿ

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೆ ವಸಂತ ಬಂಗೇರ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದು, ಧೀಮಂತ ನಾಯಕನ ಅಗಲಿಕೆ ರಾಜಕೀಯ ಗಣ್ಯರು ಸಂತಾಪವನ್ನು ಸೂಚಿಸುತ್ತಿದ್ದಾರೆ.

ನಾಳೆ ಬೆಳ್ತಂಗಡಿಯಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

India Pakistan: ಭಾರತೀಯ ಸೇನೆಗೆ ಪ್ರತಿದಾಳಿ ನಡೆಸಲು ಪೂರ್ಣ ಅಧಿಕಾರ

India Pakistan:ಕದನವಿರಾಮ ಘೋಷಿಸಿದ್ದು ಟ್ರಂಪ್: ಪ್ರಧಾನಿ ಮೋದಿಗೆ ಪತ್ರ ಬರೆದ ರಾಹುಲ್ ಗಾಂಧಿ

BRAHMOS: ಬ್ರಹ್ಮೋಸ್ ಕ್ಷಿಪಣಿ ತಾಕತ್ತು ಏನೆಂದು ಪಾಕಿಸ್ತಾನದ ಬಳಿ ಕೇಳಿ: ಯೋಗಿ ಆದಿತ್ಯನಾಥ್

ಭಾರತ, ಪಾಕಿಸ್ತಾನ ನಡುವೆ ಮಧ್ಯಸ್ಥಿಕೆ ನಡೆಸಲು ಡೊನಾಲ್ಡ್ ಟ್ರಂಪ್ ಯಾರು

India Pakistan: ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ, ಐಎಎಫ್ ಮಹತ್ವದ ಹೇಳಿಕೆ

ಮುಂದಿನ ಸುದ್ದಿ
Show comments