ನನ್ನ ಮಾತು ಕೇಳ್ತಿದ್ರೆ ಯಡಿಯೂರಪ್ಪ ಜೈಲಿಗೆ ಹೋಗ್ತಿರ್ಲಿಲ್ಲ: ಜಮೀರ್‌ ಅಹಮದ್ ಖಾನ್

Sampriya
ಶನಿವಾರ, 1 ನವೆಂಬರ್ 2025 (18:28 IST)
ವಿಜಯನಗರ: ಮೊದಲ ಬಾರಿಗೆ ಬಿಎಸ್‌ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಹಣಕಾಸು ನಿರ್ವಹಣೆ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಸಲಹೆ ಪಡೆಯಿರಿ ಎಂದು ಹೇಳಿದ್ದೆ, ಅವರು ನನ್ನ ಮಾತು ಕೇಳಿದ್ರೆ, ಜೈಲಿಗೆ ಹೋಗುತ್ತಿರಲಿಲ್ಲ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

ಇಲ್ಲಿ  ಇಂದು ನಡೆದ ಗ್ಯಾರಂಟಿ ಉತ್ಸವದಲ್ಲಿ ಮಾತನಾಡಿದ ಅವರು, ಹಣಕಾಸು ನಿರ್ವಹಣೆ ಎಂಬುದು ಸುಲಭದ ಮಾತಲ್ಲ, ಅದರಲೂ ಯಡಿಯೂರಪ್ಪ ಅವರು ಮೊದಲ ಬಾರಿಗೆ ಸಿಎಂ ಆದವರು. ಸಿದ್ದರಾಮಯ್ಯ ಆಗಲೇ 10 ಬಾರಿ ಬಜೆಟ್ ಮಂಡಿಸಿದ್ದರು. 

ರಾಜ್ಯದ ಹಿತದೃಷ್ಟಿಯಿಂದ ಅವರ ಸಲಹೆಯನ್ನು ಪಡೆಯುವಂತೆ ಹೇಳಿದ್ದೆ. ಆದರೆ ಬಿಎಸ್‌ವೈ ನನ್ನ ಮಾತನ್ನು ತಿರಸ್ಕರಿಸಿದ್ದು, ಇದರಿಂದಾಗಿಯೇ ಅವರಿಗೆ ಹಣಕಾಸು ನಿರ್ವಹಣೆ ಸಾಧ್ಯವಾಗಲಿಲ್ಲ, ಜೈಲಿಗೂ ಹೋಗುವ ಪರಿಸ್ಥಿತಿ ಬಂತು’ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಕೊಟ್ಟ ಬಳಿಕ ಯಶಸ್ವಿಯಾಗಿ ಅಭಿವೃದ್ಧಿ ಕೆಲಸಗಳನ್ನೂ ನಡೆಸುತ್ತ ಬಂದಿದೆ. ಪ್ರತಿ ತಿಂಗಳು ಗ್ಯಾರಂಟಿ ರೂಪದಲ್ಲಿ ಒಂದು ಕುಟುಂಬಕ್ಕೆ ₹6,500 ದುಡ್ಡಿನ ಉಳಿತಾಯವಾಗುತ್ತಿದೆ. ಸಿದ್ದರಾಮಯ್ಯ ಅವರ ಅನುಭವದಿಂದಲೇ ಇದೆಲ್ಲವೂ ಸಾಧ್ಯವಾಗಿದೆ ಎಂದರು. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅನ್ನದಾತರ ಜೊತೆ ಜನ್ಮದಿನ ಯಾವತ್ತೂ ಮರೆಯಲಾರೆ: ವಿಜಯೇಂದ್ರ

ತಮ್ಮ ಪಕ್ಷದಲ್ಲೇ ಬೇರೆಯವರಿಗೆ ಅವಕಾಶ ಕೊಡದ ಗಾಂಧಿ ಕುಟುಂಬದವರು ಸೇನೆ ಬಗ್ಗೆ ಮಾತನಾಡ್ತಾರೆ: ಬಿಜೆಪಿ ವ್ಯಂಗ್ಯ

ಕರ್ನಾಟಕ ಎಸ್ಎಸ್ಎಲ್ ಸಿ, ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಇಲ್ಲಿದೆ ನೋಡಿ

ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ: ಕೇಂದ್ರ ಜಿಎಸ್ ಟಿ ಇಳಿಸಿದ್ದರೆ ನಂದಿನಿ ತುಪ್ಪದ ಬೆಲೆ ಏರಿಸಿದ ಕೆಎಂಎಫ್

ಬ್ರೆಜಿಲ್ ಮಾಡೆಲ್ ಹರ್ಯಾಣದಲ್ಲಿ 22 ಬಾರಿ ವೋಟ್: ರಾಹುಲ್ ಗಾಂಧಿಯಿಂದ ಮತ್ತೊಂದು ಬಾಂಬ್

ಮುಂದಿನ ಸುದ್ದಿ
Show comments