Select Your Language

Notifications

webdunia
webdunia
webdunia
webdunia

ಬಿಜೆಪಿ ಕಚೇರಿ ಸಿಬ್ಬಂದಿಗೆ ಯಡಿಯೂರಪ್ಪ ತಾಕೀತು

ಬಿಜೆಪಿ ಕಚೇರಿ ಸಿಬ್ಬಂದಿಗೆ ಯಡಿಯೂರಪ್ಪ ತಾಕೀತು
ಬೆಂಗಳೂರು , ಬುಧವಾರ, 24 ಮೇ 2017 (18:01 IST)
ಬಿಜೆಪಿ ಪಕ್ಷದ ಯಾವುದೇ ಮಾಹಿತಿ ಸೋರಿಕೆಯಾದರೂ ಕಚೇರಿಯಿಂದ ವಿಮುಕ್ತಿಗೊಳಿಸುವುದಾಗಿ ಕಚೇರಿ ಸಿಬ್ಬಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
 
ನಗರದ ಮಲ್ಲೇಶ್ವರಂನಲ್ಲಿರುವ ಕಚೇರಿಯಲ್ಲಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದ ಬಿಎಸ್‌ವೈ, ಪಕ್ಷದ ರಣತಂತ್ರದ ಬಗ್ಗೆಯಾಗಲಿ ಅಥವಾ ಪಕ್ಷದ ಕಾರ್ಯಕ್ರಮಗಳ ಬಗ್ಗೆಯಾಗಲಿ ಯಾವುದೇ ಮಾಹಿತಿ ಸೋರಿಕೆಯಾಗಬಾರದು. ಒಂದು ವೇಳೆ ಸೋರಿಕೆಯಾದಲ್ಲಿ ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗುಡುಗಿದ್ದಾರೆ.
 
ಬಿಜೆಪಿ ಕಚೇರಿ ಸಿಬ್ಬಂದಿಯಿಂದಲೇ ಪಕ್ಷದ ನಾಯಕರ ಮಾಹಿತಿ ಸೋರಿಕೆಯಾಗುತ್ತಿದೆ ಎನ್ನುವ ಅನುಮಾನಗಳ ಹಿನ್ನೆಲೆಯಲ್ಲಿ ಯಡಿಯೂರಪ್ಪ ಇಂದು ಕಚೇರಿ ಸಿಬ್ಬಂದಿ ಸಭೆ ನಡೆಸಿದ್ದಾರೆ. 
 
ಬಿಜೆಪಿ ಕಚೇರಿಯಲ್ಲಿ ಮುಂದಿನ ಚುನಾವಣೆ ಕುರಿತಂತೆ ತೆಗೆದುಕೊಳ್ಳುತ್ತಿರುವ ತೀರ್ಮಾನಗಳು ವಿಪಕ್ಷಗಳಿಗೆ ಶರವೇಗದಲ್ಲಿ ತಲುಪುತ್ತಿರುವುದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಳವಳಕ್ಕೆ ಕಾರಣವಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಎಚ್‌.ಡಿ ಕುಮಾರಸ್ವಾಮಿ ರಾಜ್ಯ ರಾಜಕಾರಣದ ಕಟ್ಟಪ್ಪ: ತೇಜಸ್ವಿನಿ