Publish Date: Fri, 19 May 2017 (13:32 IST)
Updated Date: Fri, 19 May 2017 (13:35 IST)
ದಲಿತರ ಮನೆಯಲ್ಲಿ ಊಟ ಮಾಡಿದ್ದೇನೆ ಎನ್ನುವ ಪ್ರಚಾರ ಪಡೆಯಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದಲಿತರ ಮನೆಯಲ್ಲಿ ಖಾಸಗಿ ಹೋಟೆಲ್ ಉಪಹಾರ ಸೇವಿಸಿದ್ದಾರೆ ಎಂದು ಕಾಂಗ್ರೆಸ್ ಎಸ್‌ಟಿ ವಿಭಾಗದ ಮುಖ್ಯಸ್ಥ ಎಚ್,.ಅಂಜಿನಪ್ಪ ಲೇವಡಿ ಮಾಡಿದ್ದಾರೆ.
ದಲಿತರ ಮನೆಯಲ್ಲಿ ಮಾಡಿರುವುದನ್ನು ಯಡಿಯೂರಪ್ಪ ಸೇವಿಸಬೇಕಾಗಿತ್ತು. ಅದನ್ನು ಬಿಟ್ಟು ದಲಿತರ ಮನೆಯಲ್ಲಿ ಕುಳಿತು ಖಾಸಗಿ ಹೋಟೆಲ್‌ನಿಂದ ತರಿಸಿದ್ದ ಉಪಹಾರ ಸೇವಿಸಿರುವುದು ಇದು ಯಾವ ದಲಿತ ಪ್ರೇಮ ಎಂದು ವ್ಯಂಗ್ಯವಾಡಿದ್ದಾರೆ.
ದಲಿತರ ಮತಗಳನ್ನು ಒಡೆಯಲು ಬಿಜೆಪಿ ಗಿಮಿಕ್ ನಡೆಸಿದೆ. ಇಂತಹ ಗಿಮಿಕ್‌ಗಳಿಂದ ಮತದಾರರು ದೂರವಿರಬೇಕು ಎಂದು ಮನವಿ ಮಾಡಿದರು. ಯಡಿಯೂರಪ್ಪನವರಿಗೆ ನಿಜವಾಗಿಯೂ ದಲಿತರ ಬಗ್ಗೆ ಕಾಳಜಿಯಿದ್ದಲ್ಲಿ ಅವರ ಏಳಿಗೆಯ ಬಗ್ಗೆ ಯೋಚಿಸಲಿ ಎಂದು ಕಾಂಗ್ರೆಸ್ ಎಸ್‌ಸಿ ವಿಭಾಗದ ಮುಖ್ಯಸ್ಥ ಅಂಜಿನಪ್ಪ ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.