Publish Date: Mon, 20 Feb 2023 (18:44 IST)
Updated Date: Mon, 20 Feb 2023 (18:48 IST)
ಹಿಟ್ ಅಂಡ್ ರನ್ ಖ್ಯಾತಿಯ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರಾಯಶಃ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ಧ ಕಟುವಾದ ಟೀಕೆ ಮಾಡಿದ್ದಾರೆ. ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಜಯಂತಿ ಉತ್ಸವದಲ್ಲಿ ಭಾಗವಹಿಸಿ ಮಾತಾಡಿದ ಯತ್ನಾಳ್, ಸಿದ್ದರಾಮಯ್ಯನವರು ತಾನು ಹಿಂದೂ ಆದರೆ ಹಿಂದೂತ್ವ ಒಪ್ಪಲ್ಲ ಅನ್ನುತ್ತಾರೆ, ಅದರರ್ಥ ಅಪ್ಪನಿಗೆ ಹುಟ್ಟಿದ್ದೀನಿ ಆದರೆ ಖಾತ್ರಿ ಇಲ್ಲ ಎಂದು ಹೇಳಿ ಜನರ ಚಪ್ಪಾಳೆ ಗಿಟ್ಟಿಸಿದರು. ನಿಮಗೆ ನೆನಪಿರಬಹುದು ಸಚಿವ ಮುರಗೇಶ್ ನಿರಾಣಿ ವಿಷಯದಲ್ಲೂ ಅವರು ಇದೇ ಬಗೆಯ ಕಾಮೆಂಟ್ ಮಾಡಿದ್ದರು. ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕವಾಗಿ ಮಾತಾಡುವಾಗ ನಾಲಗೆ ಮೇಲೆ ಹಿಡಿತವಿರಲಿ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯತ್ನಾಳ್ ರನ್ನು ಕೆಲವೇ ದಿನಗಳ ಹಿಂದೆ ಎಚ್ಚರಿಸಿದ್ದರೂ ವಿಜಯಪುರ ಶಾಸಕ ತಮ್ಮ ಹಳೇ ಚಾಳಿಗೆ ಮರಳಿದ್ದಾರೆ.