Publish Date: Wed, 13 Apr 2022 (20:39 IST)
Updated Date: Wed, 13 Apr 2022 (20:41 IST)
ರಾಕಿಂಗ್ ಸ್ಟಾರ್ ಯಶ್ ಸದ್ಯ ಕೆಜಿಎಫ್-2 ಬಿಡುಗಡೆಯ ಬ್ಯುಸಿಯಲ್ಲಿದ್ದಾರೆ. ಇಡೀ ವಿಶ್ವವೇ ಕಾತರದಿಂದ ಕಾಯುತ್ತಿರುವ ಕೆಜಿಎಫ್-2 ನಾಳೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಯಶ್ & ತಂಡ ದೇಶದಾದ್ಯಂತ ಪ್ರಮೋಷನ್ನಲ್ಲಿ ತೊಡಗಿಕೊಂಡಿದ್ದು, ಭಾರತದ ಬಹುತೇಕ ಭಾಗಗಳಿಗೆ ಭೇಟಿ ನೀಡಿದ್ದಾರೆ..ಇತ್ತೀಚಿಗಷ್ಟೆ ಆಂಧ್ರಪ್ರದೇಶದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ರು..ಸುದ್ದಿಗೋಷ್ಠಿಗೆ ಹಾಜರಾಗ್ತಿದ್ದಂತೆ ಯಶ್ ವಿರುದ್ಧ ತೆಲುಗು ಮಾಧ್ಯಮ ಗರಂ ಆಗಿತ್ತು. ಪತ್ರಕರ್ತರೊಬ್ಬರು ಸುದ್ದಿಗೋಷ್ಠಿಗೆ ತಡವಾಗಿ ಬಂದಿದ್ದೀರಿ. ಎಲ್ಲರೂ ಗಂಟೆಯಿಂದ ಕಾಯುತ್ತಿದ್ದೀವಿ ಎಂದು ಹೇಳಿದ ಮಾತಿಗೆ ಯಶ್ ತೆಲುಗು ಮಾಧ್ಯಮದ ಮುಂದೆ ಕ್ಷಮೆ ಕೇಳಿದರು..ಇದೇ ರೀತಿಯ ಸಂದರ್ಭ ಈ ಹಿಂದೆ ತೆಲುಗು ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಬೆಂಗಳೂರಿನಲ್ಲಿ ಎದುರಾಗಿತ್ತು..ಸದ್ಯ ಈ 2 ಘಟನೆ ಈಗ ಚರ್ಚೆಗೆ ಕಾರಣವಾಗಿದೆ.ಈ ಎರಡು ವಿಡಿಯೋ ಕ್ಲಿಪ್ಪಿಂಗ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.