Publish Date: Wed, 16 Sep 2026 (15:59 IST)
Updated Date: Wed, 16 Sep 2026 (16:04 IST)
ಮೈಸೂರು: ಗಣೇಶನ ಮೂರ್ತಿ ಕೈಯಲ್ಲಿ ಹಿಡಿದುಕೊಂಡು ಚಪ್ಪಲಿ ಧರಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಕ್ಕೆ ಟೀಕೆ ಕೇಳಿಬಂದ ಹಿನ್ನಲೆಯಲ್ಲಿ ಸಂಸದ ಯದುವೀರ್ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಗಣೇಶ ಮೆರವಣಿಗೆ ಮಾಡುವುದಕ್ಕೆ ಮಸೀದಿ ರಸ್ತೆಯಲ್ಲಿ ನಿರ್ಬಂಧ ವಿಧಿಸಿದ್ದು ಬಿಜೆಪಿಗರನ್ನು ಕೆರಳಿಸಿತ್ತು. ಈ ಸಂಬಂಧ ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಗಣೇಶನ ಮೂರ್ತಿಯನ್ನು ಕೈಯಲ್ಲಿ ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದರು.
ಮೈಸೂರು ಸಂಸದ ಯದುವೀರ್ ಒಡೆಯರ್ ಕೂಡಾ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಎಲ್ಲಾ ನಾಯಕರೂ ಕಾಲಲ್ಲಿ ಚಪ್ಪಲಿ ಧರಿಸಿ ಕೈಯಲ್ಲಿ ಗಣೇಶ ಮೂರ್ತಿಯನ್ನು ಹಿಡಿದುಕೊಂಡಿದ್ದರು. ಇದಕ್ಕೀಗ ಯದುವೀರ್ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ.
ಹಿಂದೂ ಧರ್ಮದ ಬಗ್ಗೆ ಸ್ವಲ್ಪ ಮಾಹಿತಿ ಗೊತ್ತಿರಬೇಕು. ಪ್ರತಿಷ್ಠಾಪನೆ ಆಗುವಾಗ ಒಂದು ಮೂರ್ತಿಗೆ ಗೌರವ ಕೊಡೋದು. ಆ ಮೂರ್ತಿಗೆ ಇನ್ನೂ ಪ್ರತಿಷ್ಠಾಪನೆ ಆಗಿರಲಿಲ್ಲ. ಹೀಗಾಗಿ ಪ್ರತಿಭಟನೆ ನಡೆಸುವಾಗ ಆ ರಸ್ತೆಯಲ್ಲಿ ಕೂತಿರುವಾಗ ಚಪ್ಪಲಿ ಹಾಕಿದ್ದೇವೆ. ಅದು ತಪ್ಪಲ್ಲ. ಹೇಗೇ ಇದ್ದರೂ ಗಣೇಶನ ಮೂರ್ತಿಗೆ ಗೌರವ ಕೊಡಬೇಕು ನಿಜ. ಆದರೆ ಪ್ರತಿಷ್ಠಾಪನೆ ಆಗಿರದ ಕಾರಣ ಚಪ್ಪಲಿ ಹಾಕಿದ್ದರಿಂದ ತಪ್ಪಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ