Select Your Language

Notifications

webdunia
webdunia
webdunia
webdunia

ಯಡಿಯೂರಪ್ಪ, ನನ್ನ ನಡುವಿನ ವೈಮನಸ್ಸು ಇಂಡಿಯಾ-ಪಾಕಿಸ್ತಾನದಂತಲ್ಲ: ಕೆ.ಎಸ್.ಈಶ್ವರಪ್ಪ

ಯಡಿಯೂರಪ್ಪ, ನನ್ನ ನಡುವಿನ ವೈಮನಸ್ಸು ಇಂಡಿಯಾ-ಪಾಕಿಸ್ತಾನದಂತಲ್ಲ: ಕೆ.ಎಸ್.ಈಶ್ವರಪ್ಪ
ಬಾಗಲಕೋಟೆ , ಗುರುವಾರ, 19 ಜನವರಿ 2017 (13:52 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ನನ್ನ ನಡುವಿನ ವೈಮನಸ್ಸು ಇಂಡಿಯಾ-ಪಾಕಿಸ್ತಾನದಂತಲ್ಲ. ಖಂಡಿತವಾಗಿಯೂ ನಾವು ಒಂದಾಗುತ್ತೇವೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹಾಗೂ ಯಡಿಯೂರಪ್ಪ ಅವರ ಉದ್ದೇಶ ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರುವುದೇ ಆಗಿದೆ. ನಾನು ಪಕ್ಷ ಬಿಡುವುದಿಲ್ಲ. ಹಾಗೇ ಯಡಿಯೂರಪ್ಪ ಅವರು ಪಕ್ಷ ಬಿಡುವುದಿಲ್ಲ ಎಂಬ ನಂಬಿಕೆ ಇದೆ. ಹಿರಿಯ ನಾಯಕರ ಮಾತು ಕೇಳಿ ನಾವಿಬ್ಬರು ಶೀಘ್ರವೇ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕರೆದಿರುವ ಸಭೆಯಲ್ಲಿ ನನ್ನ ಪಾತ್ರವಿಲ್ಲ. ಸಭೆಗೆ ನನಗೆ ಆಹ್ವಾನವೂ ಬಂದಿಲ್ಲ. ಏಕಪಕ್ಷೀಯ ನಿರ್ಧಾರದಿಂದ ನೋವು ಅನುಭವಿಸಿರುವ ಅತೃಪ್ತ ಶಾಸಕರು ಸಭೆಗೆ ಹೋಗಿದ್ದಾರೆ ಎಂದರು. 
 
ಕೇವಲ ಯಡಿಯೂರಪ್ಪ ಅಷ್ಟೇ ಅಲ್ಲ, ನನ್ನ ಮುಖ ನೋಡಿಯೂ ಜನ ವೋಟ್ ಹಾಕಲ್ಲ. ವ್ಯಕ್ತಿಯನ್ನು ನೋಡಿ ಮತ ಹಾಕುವದಾದರೇ ರಾಜ್ಯದಲ್ಲಿ ಕೆಜೆಪಿ ಸರಕಾರ ಯಾಕೆ ಅಧಿಕಾರಕ್ಕೆ ಬರಲಿಲ್ಲ. ವ್ಯಕ್ತಿಗಿಂತ ಪಕ್ಷವೇ ಮುಖ್ಯ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಪರೋಕ್ಷವಾಗಿ ಬಿಎಸ್‌ವೈಗೆ ಟಾಂಗ್ ನೀಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೋಟು ರದ್ದತಿ ಮಾತುಕತೆ 2016 ಜನವರಿಯಲ್ಲೇ ಆರಂಭ