Select Your Language

Notifications

webdunia
webdunia
webdunia
webdunia

33 ದಲಿತ ಕುಟುಂಬಗಳನ್ನ ಮನೆಗೆ ಆಹ್ವಾನಿಸಿದ ಯಡಿಯೂರಪ್ಪ

33 ದಲಿತ ಕುಟುಂಬಗಳನ್ನ ಮನೆಗೆ ಆಹ್ವಾನಿಸಿದ ಯಡಿಯೂರಪ್ಪ
ಬೆಂಗಳೂರು , ಶುಕ್ರವಾರ, 25 ಆಗಸ್ಟ್ 2017 (13:23 IST)
ಬಿಜೆಪಿ ನಡಿಗೆ ದಲಿತರ ಮನೆಗೆ ಎಂಬ ಜನಸಂಪರ್ಕ ಅಭಿಯಾನ ನಡೆಸಿದ್ದ ಮಾಜಿ ಸಿಎಂ ಯಡಿಯೂರಪ್ಪ ದಲಿತ ಕುಟುಂಬಗಳಿಗೆ ತಮ್ಮ ಮನೆಗೆ ಆಹ್ವಾನ ನೀಡಿದ್ದಾರೆ.

ಜನ ಸಂಪರ್ಕ ಅಭಿಯಾನದ ಸಂದರ್ಭ ತಮಗೆ ಸತ್ಕರಿಸಿದ್ದ 33 ಕುಟುಂಬಗಳನ್ನ ಆಗಸ್ಟ್ 28ಕ್ಕೆ 33 ದಲಿತ ಕುಟುಂಬಗಳನ್ನ ಡಾಲರ್ಸ್ ಕಾಲೋನಿಯ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದು, ವಿಶಿಷ್ಟ ಸತ್ಕಾರ ಕುಡ ನಡೆಯಲಿದೆ. ವಿಶಿಷ್ಟ ಟಡುಗೆ ತಯಾರಿಸಿ ದಲಿತರ ಜೊತೆಯೇ ಯಡಿಯೂರಪ್ಪ ಊಟ ಮಾಡುವ ಸಾಧ್ಯತೆ ಇದೆ.

ಜನಸಂಪರ್ಕ ಸಭೆ ಸಂದರ್ಭ ಹೋಟೆಲ್`ನಿಂದ ತರಿಸಿದ ಆಹಾರವನ್ನ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಸೇವಿಸಿ ಬರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರ ಮಧ್ಯೆ, ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಲು ಯಡಿಯೂರಪ್ಪ ಈ ಔತಣಕೂಟ ಆಯೋಜಿಸಿದ್ದಾರೆ ಎನ್ನಲಾಗಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ವಿರುದ್ಧದ 15 ಡಿನೋಟಿಫಿಕೆಶನ್ ಪ್ರಕರಣಗಳಿಗೆ ಮರು ಜೀವ..!