Select Your Language

Notifications

webdunia
webdunia
webdunia
webdunia

ಮನೇಲಿ ತಿಂದು ಸಾಯಲಿ, ಸಾರ್ವಜನಿಕವಾಗಿ ತಿಂದದ್ದು ಅಕ್ಷಮ್ಯ ಅಪರಾಧ: ಯಡಿಯೂರಪ್ಪ

ಮನೇಲಿ ತಿಂದು ಸಾಯಲಿ, ಸಾರ್ವಜನಿಕವಾಗಿ ತಿಂದದ್ದು ಅಕ್ಷಮ್ಯ ಅಪರಾಧ: ಯಡಿಯೂರಪ್ಪ
ಬಳ್ಳಾರಿ , ಮಂಗಳವಾರ, 27 ಜೂನ್ 2017 (11:16 IST)
ಮೈಸೂರಿನ ಕಲಾಮಂದಿರದಲ್ಲಿ ಗೋಮಾಂಸ ಭಕ್ಷಣೆ ಕುರಿತಂತೆ ಪ್ರೊಫೆಸರ್ ಭಗವಾನ್ ಸೇರಿ ಪ್ರಗತಿಪರರ ವಿರುದ್ಧ ಮಾಜಿ ಸಿಎಂ ಯಡಿಯೂರಪ್ಪ ಕಿಡಿ ಕಾರಿದ್ದಾರೆ.

ಸಾರ್ವಜನಿಕವಾಗಿ ಗೋಮಾಂಸ ಭಕ್ಷಣೆ ಮಾಡಿದ್ದು ಅಕ್ಷಮ್ಯ ಅಪರಾಧ, ಕ್ರಮ ಕೈಗೊಳ್ಳಬೇಕು, ಬಹಿಷ್ಕಾರ ಹಾಕಬೇಕು ಎಂದು ಬಳ್ಳಾರಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರನ್ನ ಮನೆಯಲ್ಲಿ ತಿಂದು ಸಾಯಲಿ, ಸಾರ್ವಜನಿಕವಾಗಿ ಗೋಮಾಂಸ ಭಕ್ಷಣೆ ಮಾಡಿದ್ದನ್ನ ಯಾರೂ ಒಪ್ಪುವುದಿಲ್ಲ ಎಂದು ಕಿಡಿ ಕಾರಿದ್ದಾರೆ. ಸಾರ್ವಜನಿಕರ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಬಹುಜನರ ಆಹಾರ ಪದ್ಧತಿ ಮೇಲೆ ಆಕ್ರಮಣವಾಗುತ್ತಿದೆ ಎಂದು ಆರೋಪಿಸಿ ಕೆ.ಎಸ್. ಭಗವಾನ್, ಮಹೇಶ ಚಂದ್ರ ಗುರು ಸೇರಿದಂತೆ ಹಲವು ಪ್ರತಿಪರರು ಮೈಸೂರಿನ ಕಲಾಮಂದಿರದಲ್ಲಿ ಗೋಮಾಂಸ ಭಕ್ಷಣೆ ಮಾಡಿ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಪತ್ನಿಯ ನಿರೀಕ್ಷೆಯಲ್ಲಿ ಶ್ವೇತಭವನದ ಗಾರ್ಡ್ ಮಾಡಿದ ಎಡವಟ್ಟೇನು?