Webdunia - Bharat's app for daily news and videos

Install App

ರಾಜ್ಯದಲ್ಲಿಂದು ಆಂಜನೇಯನ ದೇಗುಲಗಳಲ್ಲಿ ರಾಮನ ಆರಾಧನೆ

Webdunia
ಭಾನುವಾರ, 10 ಏಪ್ರಿಲ್ 2022 (07:01 IST)
ಬೆಂಗಳೂರು : ನಾಡಿನೆಲ್ಲೆಡೆ ಇಂದು ರಾಮನವಮಿ ಸಂಭ್ರಮ.

ರಾಮ ಹುಟ್ಟಿದ ದಿನವನ್ನು ಅದ್ದೂರಿಯಾಗಿ ಆಚರಿಸಲು ಬೆಂಗಳೂರಿನಾದ್ಯಂತ ಸಿದ್ಧತೆ ಮಾಡಲಾಗಿದ್ದು, ರಥಯಾತ್ರೆ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ರಾಜಧಾನಿ ಎಲ್ಲೆಡೆ ಇಂದು ರಾಮ ನಾಮ ಭಜನೆ ಜಪಿಸಲಿದೆ. ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿದೆ. ಇಡೀ ದಿನ ಭಕ್ತರು ಉಪವಾಸ ಇದ್ದು ವ್ರತ ಮಾಡಿ ಪಾನಕ, ಕೋಸಂಬರಿ, ಮಜ್ಜಿಗೆ ಸೇವಿಸಿದರೆ ಶುಭ ಆಗುತ್ತೆ ಅನ್ನೋ ನಂಬಿಕೆಯಿದೆ.

ಒಂದೆಡೆ ದೇವಾಲಯಗಳಲ್ಲಿ ಜೈ ರಾಮ ಭಜನೆ ಮೊಳಗುತ್ತಿದ್ರೇ ಮತ್ತೊಂದೆಡೆ ರಾಮನವಮಿ ಅಂಗವಾಗಿ ಬೃಹತ್ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ನಗರದ ಕೋರಮಂಗಲದ ಎರಡನೇ ಕ್ರಾಸ್ ನಿಂದ ಸಂಜೆ 4 ಗಂಟೆಯಿಂದ ಆರಂಭವಾಗಲಿದೆ.

ಇನ್ನೊಂದೆಡೆ ವಿಶ್ವ ಹಿಂದೂ ಪರಿಷದ್ ಹೆಬ್ಬಾಳ ಘಟಕದಿಂದಲೂ ರಾಮರಥ ಯಾತ್ರೆ ಶೋಭಾ ಯಾತ್ರೆಯನ್ನು ಆಯೋಜಿಸಲಾಗಿದೆ. ಈ ರಥಯಾತ್ರೆ ಸಂಜೆ 4 ಕ್ಕೆ ಅಶ್ವಥನಗರದಿಂದ ಆರಂಭವಾಗಿ ಸಂಜಯನಗರ ಮುಖ್ಯರಸ್ತೆಯ ಮೂಲಕ ಸಾಗಿ ಭೂಪಸಂದ್ರದಲ್ಲಿ ಕೊನೆಯಾಗುವುದು.

ಇತ್ತ ಇಂದಿನಿಂದ 2 ದಿನಗಳ ಕಾಲ ಗಾಳಿ ಆಂಜನೇಯ, ಸ್ಯಾಟಲೈಟ್ ಬಸ್ ನಿಲ್ದಾಣದ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿಷೇಧವಿದೆ. 2 ದಿನಗಳ ಕಾಲ ಗಾಳಿ ಆಂಜನೇಯ ದೇಗುಲದಲ್ಲಿ ರಥೋತ್ಸವ ನಡೆಯಲಿದ್ದು, 2 ದಿನ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಬೇಕಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments