Select Your Language

Notifications

webdunia
webdunia
webdunia
webdunia

ಮೋದಿ ಸಾರ್​ ಬರದ ಬಗ್ಗೆ ಚಿಂತಿಸಿ

i

INDIA
bangalore , ಶುಕ್ರವಾರ, 15 ಸೆಪ್ಟಂಬರ್ 2023 (20:00 IST)
INDIA ಕೂಟವು ಸನಾತನ ಧರ್ಮದ ವಿನಾಶಕ್ಕೆ ಯತ್ನಿಸುತ್ತಿದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಸಚಿವ ಶಿವಾನಂದ ಪಾಟೀಲ್ ತಿರುಗೇಟು ನೀಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಮೊದಲು ಬರಗಾಲದ ಬಗ್ಗೆ ಮೋದಿಯವರು ಮಾತನಾಡಲಿ. ಇಡೀ ರಾಜ್ಯದ ರೈತರು ಸಿಎಂಗೆ ಒತ್ತಾಯಿಸಿ ಬರಗಾಲ ಘೋಷಣೆ ಮಾಡಿಸಿಕೊಂಡಿದ್ದಾರೆ. ಹಾಗಾಗಿ ಇಡೀ ಸೌಥ್ ಕರ್ನಾಟಕದಲ್ಲಿಯೇ ಬರಗಾಲ ಇದೆ. ಮಹಾರಾಷ್ಟ್ರ, ಆಂಧ್ರಗಳಲ್ಲಿ ಡ್ಯಾಂಗಳು ತುಂಬಿಲ್ಲ. ತಮಿಳುನಾಡಿನ ಜನರು ಕುಡಿಯೋ ನೀರಿಗಾಗಿ ಜಗಳ ಮಾಡ್ತಿದ್ದಾರೆ. ಅದರ ಬಗ್ಗೆ ಮೋದಿಯವರು ಮೊದಲು ಚಿಂತನೆ ಮಾಡಲಿ. ಸನಾತನ ಧರ್ಮ ಸೇರಿ ಧರ್ಮಗಳು ಈ ಭೂಮಿ ಮೇಲೆ ಸಾವಿರಾರು ವರ್ಷಗಳಿಂದ ಇದ್ದಾವೆ. ಅವುಗಳ ಬಗ್ಗೆ ವ್ಯಾಖ್ಯಾನ ಮಾಡಿ ನಾವೇನು ಹೊಟ್ಟೆ ತುಂಬಿಸಿಕೊಳ್ಳುವುದಿದೆಯಾ? ಎಂದು ಕಿಡಿಕಾರಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಯುವ ಸಮುದಾಯಕ್ಕೆ ಹೆಚ್ಚಿನ ಜವಾಬ್ದಾರಿಯಿದೆ-ಡಿ.ಕೆ.ಶಿವಕುಮಾರ್