Select Your Language

Notifications

webdunia
webdunia
webdunia
webdunia

ಗನ್ ಹಿಡಿದ ಯುವಕರಿಂದ ಆತಂಕ

Worried about young men with guns
ಹಾಸನ , ಮಂಗಳವಾರ, 23 ಆಗಸ್ಟ್ 2022 (21:15 IST)
ಹಾಸನದಲ್ಲಿ ಗನ್‌ ಹಿಡಿದು ಯುವಕರ ಸಂಚರಿಸುತ್ತಿರುವ ವಿಡಿಯೋವೊಂದು CCTV ಯಲ್ಲಿ ಸೆರೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. 
ಹಾಸನ ನಗರದ ಹೌಸಿಂಗ್‌ ಬೋರ್ಡ್‌ನಲ್ಲಿರುವ ಬಿಜೆಪಿ ಮುಖಂಡನ ನಿವಾಸಕ್ಕೆ ಹಾಡಹಗಲೇ ಕಿಡಿಗೇಡಿಗಳು ಬಂದಿದ್ದಾರೆ.  ಇಬ್ಬರು ಕಿಡಿಗೇಡಿಗಳು ಡೆಲಿವರಿ ಬಾಯ್ಸ್‌ ರೀತಿ ಕೈಯಲ್ಲಿ ಗನ್‌ ಹಿಡಿದು, ಬಿಜೆಪಿ ಮುಖಂಡ ಡಿ.ಟಿ.ಪ್ರಕಾಶ್ ನಿವಾಸಕ್ಕೆ ಬಂದಿದ್ದಾರೆ. ಮನೆ ಆವರಣಕ್ಕೆ ಎಂಟ್ರಿಯಾಗ್ತಿದ್ದಂತೆ ಮಹಿಳೆ ಸರ ಕದಿಯಲು ಯತ್ನಿಸಿದ್ದಾರೆ. ಕೈಯಲ್ಲಿ ಗನ್‌ ನೋಡ್ತಿದ್ದಂತೆ ಮಹಿಳೆ ಚೀರಾಡಲು ಶುರು ಮಾಡಿದ್ದಾಳೆ. ತಕ್ಷಣ ದುಷ್ಕರ್ಮಿಗಳು ಸ್ಥಳದಿಂದ ಪರಾರಿ ಆಗಿದ್ದಾರೆ. ಸದ್ಯ ಹಾಸನ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಕ್ಕ ಚಿನ್ನದ ಸರ ಹಿಂದಿರುಗಿಸಿದ ಮಹಿಳೆ