Webdunia - Bharat's app for daily news and videos

Install App

ಕಾರ್ಯನಿರತ ಪತ್ರಕರ್ತರ ಸಂಘ; ಚುನಾವಣಾ ವೇಳಾಪಟ್ಟಿ ಪ್ರಕಟ

Webdunia
ಮಂಗಳವಾರ, 8 ಫೆಬ್ರವರಿ 2022 (20:24 IST)
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2022-2025 ನೇ ಸಾಲಿನ ರಾಜ್ಯ ಮತ್ತು ಜಿಲ್ಲಾ ಕಾರ್ಯಕಾರಿ ಮಂಡಳಿ ಚುನಾವಣೆಯನ್ನು (ಖಿhe ಏಚಿಡಿಟಿಚಿಣಚಿಞಚಿ ಖಿಡಿಚಿಜe Uಟಿioಟಿ ಇಟeಛಿಣioಟಿ (ಒoಜeಟ)  ರೂಲ್ಸ್ 1953 ರ ನಿಯಮ 3 ಮತ್ತು 4 ರ ಪ್ರಕಾರ) ಘೋಷಣೆ ಮಾಡಲಾಗಿದ್ದು, ರಾಜ್ಯ ಘಟಕ ಮತ್ತು ಜಿಲ್ಲಾ ಘಟಕಗಳಿಗೆ ನಿಗದಿತ ದಿನಾಂಕದಂದು ಏಕಕಾಲದಲ್ಲಿ ಮತದಾನ ನಡೆಸಲು ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ. 
ಫೆಬ್ರವರಿ, 07 ರಂದು ಕೇಂದ್ರ ಕಾರ್ಯಾಲಯದಲ್ಲಿ ಮತ್ತು ಜಿಲ್ಲಾ ಕಾರ್ಯಾಲಯದಲ್ಲಿ ಅಥವಾ ಚುನಾವಣೆ ನಡೆಯುವ ಸ್ಥಳದಲ್ಲಿ ಅರ್ಹ ಮತದಾರರ ಪಟ್ಟಿ ಪೂರ್ವಭಾವಿ ಪ್ರಕಟಣೆ. ಫೆಬ್ರವರಿ, 09 ರಂದು ಮತದಾರರ ಪಟ್ಟಿಯಲ್ಲಿನ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. 
ಫೆಬ್ರವರಿ, 11 ರಂದು ಮಧ್ಯಾಹ್ನ 12 ಗಂಟೆಗೆ ಅಂತಿಮ ಮತದಾರರ ಪಟ್ಟಿ ಪ್ರಕಟಣೆ, ನಾಮಪತ್ರ ಸಲ್ಲಿಕೆ ಆರಂಭ. ಫೆಬ್ರವರಿ, 14 ರಂದು ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಫೆಬ್ರವರಿ, 16 ರಂದು ಮಧ್ಯಾಹ್ನ 1 ಗಂಟೆ ನಂತರ ನಾಮಪತ್ರಗಳ ಪರಿಶೀಲನೆ ಹಾಗೂ ಕ್ರಮಬದ್ಧ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ. ಫೆಬ್ರವರಿ, 19 ರಂದು ಮಧ್ಯಾಹ್ನ 1 ಗಂಟೆಯ ಒಳಗೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಫೆಬ್ರವರಿ, 19 ರಂದು ಮಧ್ಯಾಹ್ನ 2 ಗಂಟೆಯ ನಂತರ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ. ಫೆಬ್ರವರಿ, 27 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಗತ್ಯ ಬಿದ್ದಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ, 27 ರಂದು ಮಧ್ಯಾಹ್ನ 3.30 ರ ನಂತರ ಮತ ಎಣಿಕೆ ನಡೆಯಲಿದೆ. ಫಲಿತಾಂಶ ಪ್ರಕಟವಾಗಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸು.ತ.ರಾಮೇಗೌಡ ಅವರು ತಿಳಿಸಿದ್ದಾರೆ. 
   ಸಂಘದ 2022-2025 ನೇ ಸಾಲಿನ ರಾಜ್ಯ ಸಂಘದ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯು ಫೆಬ್ರವರಿ, 27 ರಂದು ರಾಜ್ಯ ಸಂಘದ ಕಚೇರಿ ಹಾಗೂ ಜಿಲ್ಲಾ ಘಟಕದ ಕಚೇರಿಯಲ್ಲಿ ಏಕಕಾಲಕ್ಕೆ ನಡೆಯಲಿದೆ.
   ಜಿಲ್ಲಾ ಘಟಕಗಳಿಗೂ ರಾಜ್ಯ ಸಂಘದ ಚುನಾವಣೆ ಜೊತೆಯಲ್ಲಿಯೆ ಕಡ್ಡಾಯವಾಗಿ ಚುನಾವಣೆ ನಡೆಯಬೇಕು.    ಅಧ್ಯಕ್ಷರು (ಒಂದು ಹುದ್ದೆ-ಕೇಂದ್ರ ಸ್ಥಾನ),  ಉಪಾಧ್ಯಕ್ಷರು (ಒಟ್ಟು ಮೂರು ಹುದ್ದೆ) ಪ್ರಧಾನ ಕಾರ್ಯದರ್ಶಿ (ಒಂದು ಹುದ್ದೆ-ಕೇಂದ್ರ ಸ್ಥಾನ), ಕಾರ್ಯದರ್ಶಿಗಳು (ಒಟ್ಟು ಮೂರು ಹುದ್ದೆ), ಖಜಾಂಚಿ (ಒಂದು ಹುದ್ದೆ-ಕೇಂದ್ರ ಸ್ಥಾನ) ಈ ಹುದ್ದೆಗಳಿಗೆ ಚುನಾವಣೆ ನಡೆಯಲಿದೆ.
   ಜಿಲ್ಲಾ ಕಾರ್ಯಕಾರಿಣಿಯ 15 ಸದಸ್ಯರು ಹಾಗೂ ಪದಾಧಿಕಾರಿಗಳ ಆಯ್ಕೆಗೆ ಅಭ್ಯರ್ಥಿಯ ಹೆಸರಿನ ಮುಂದೆ(ಘಿ) ಗುರ್ತಿನ ಮೂಲಕ ಮತ ಚಲಾಯಿಸಬೇಕು. 31 ಮಂದಿ ರಾಜ್ಯ ಸಮಿತಿ ಸದಸ್ಯರನ್ನು ಜಿಲ್ಲೆಗೆ ಒಬ್ಬರಂತೆ ಆ ಜಿಲ್ಲೆಯವರೇ ಚುನಾಯಿಸಿ ಕಳುಹಿಸಬೆಕು. ಒಬ್ಬ ಅಭ್ಯರ್ಥಿಯು ಪದಾಧಿಕಾರಿ ಹುದ್ದೆ ಅಥವ ಕಾರ್ಯಕಾರಿ ಸಮಿತಿ ಸದಸ್ಯತ್ವ ಈ ಎರಡರಲ್ಲಿ ಯಾವುದಾದರೂ ಒಂದಕ್ಕೆ ಮಾತ್ರ ಸ್ಪರ್ಧಿಸಬಹುದು.
   ರಾಜ್ಯ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿ ಹುದ್ದೆಗೆ ಸ್ಪರ್ಧಿಸುವವರು ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮತದಾರರ ಪಟ್ಟಿಯಲ್ಲಿ ಹೆಸರು ಕಡ್ಡಾಯವಾಗಿ ಇರಲೇಬೇಕು. ಜಿಲ್ಲಾ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿ ಸ್ಥಾನಕ್ಕೆ ಸ್ಪರ್ಧೆ ಮಾಡುವವರು ಆಯಾಯ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಸದಸ್ಯತ್ವ ಪಟ್ಟಿಯಲ್ಲಿ ಹೆಸರಿರಬೇಕು.
   ರಾಜ್ಯ 3 ಉಪಾಧ್ಯಕ್ಷ ಹಾಗೂ 3 ಕಾರ್ಯದರ್ಶಿ ಹುದ್ದೆಗಳಿಗೆ ರಾಜ್ಯದ ಯಾವುದೇ ಭಾಗದ ಸದಸ್ಯರು ಚುನಾವಣಾ ನಿಬಂಧನೆಗಳ ಅನುಸಾರ ಸ್ಪರ್ಧಿಸಹುದು.
   ಜಿಲ್ಲಾ ಘಟಕ ಹಾಗೂ ರಾಜ್ಯ ಘಟಕಕ್ಕೆ ಸ್ಪರ್ಧಿಸುವಾಗಲೂ ಕೂಡ ಒಂದೇ ಕಡೆ ಸ್ಪರ್ಧೆಯಲ್ಲಿರಬೇಕು. ಜಿಲ್ಲಾ ಹಾಗೂ ರಾಜ್ಯ ಸಂಘಕ್ಕೆ ಏಕಕಾಲಕ್ಕೆ ಎರಡೂ ಕಡೆ ಒಬ್ಬ ವ್ಯಕ್ತಿ ಸ್ಪರ್ಧಿಸುವಂತಿಲ್ಲ.
   ಪ್ರತಿಯೊಂದು ನಾಮಪತ್ರವು ಸಂಘದ ಓರ್ವ ಅರ್ಹ ಸದಸ್ಯರಿಂದ ಸೂಚನೆ ಹಾಗೂ ಒಬ್ಬ ಅರ್ಹ ಸದಸ್ಯರಿಂದ ಅನುಮೋದನೆ ಪಡೆದಿರುವುದು ಅವಶ್ಯಕ.
   ರಾಜ್ಯ ಅಧ್ಯಕ್ಷ ಸ್ಥಾನಕ್ಕೆ 5 ಸಾವಿರ ರೂ. ಮತ್ತು ಪ್ರಧಾನ ಕಾರ್ಯದರ್ಶಿ, ರಾಜ್ಯ ಉಪಾಧ್ಯಕ್ಷರುಗಳು, ಕಾರ್ಯದರ್ಶಿಗಳು ಹಾಗೂ ಖಜಾಂಜಿ ಹುದ್ದೆಗಳಿಗೆ ನಾಮಪತ್ರ ಸಲ್ಲಿಸುವವರು 4 ಸಾವಿರ ರೂ. ಗಳನ್ನು ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುವವರು 3 ಸಾವಿರ ರೂ.  ಠೇವಣಿಯನ್ನು ನೀಡಬೇಕು (ಪ್ರತಿ ಜಿಲ್ಲೆಯಿಂದ ಒಬ್ಬರು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು ಇರುತ್ತಾರೆ)
   ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ 4 ಸಾವಿರ ರೂ. ಠೇವಣಿ, ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರುಗಳು, ಕಾರ್ಯದರ್ಶಿಗಳು ಹಾಗೂ ಖಜಾಂಜಿ ಸ್ಥಾನಕ್ಕೆ ಸ್ಪರ್ಧಿಸುವವರು  3 ಸಾವಿರ ರೂ.ಗಳನ್ನು ಮತ್ತು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುವವರು 1 ಸಾವಿರ ರೂ. ಠೇವಣಿ ಕಟ್ಟಬೇಕು. ಚುನಾವಣೆ ಒಂದೇ ರೀತಿಯದ್ದಾಗಿದ್ದು ನಾಮಪತ್ರ ವಾಪಸ್ಸು ಪಡೆದವರನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಠೇವಣಿ ಹಣ ಮರುಪಾವತಿ ಮಾಡುವುದಿಲ್ಲ.
  ರಾಜ್ಯ ಮತ್ತು ಜಿಲ್ಲೆಗಳಲ್ಲಿ ಚುನಾವಣೆಗೆ ಸ್ಪರ್ಧಿಸುವವರು ಯವುದೇ ರಾಜಕೀಯ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನಾಗಲಿ, ಅಧಿಕಾರ ಹುದ್ದೆಗಳಲ್ಲಿ ಇರಬಾರದು.
  ಮತದಾನವು ರಾಜ್ಯ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಫೆಬ್ರವರಿ, 27 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿದ್ದು. ಮತದಾರರು ಸ್ವಂತ ಖರ್ಚಿನಲ್ಲಿ ಬಂದು ಮತದಾನದ ಹಕ್ಕನ್ನು ಚಲಾಯಿಸಬೇಕು. 
  ಜಿಲ್ಲಾ ಸಂಘದ ಪದಾಧಿಕಾರಿ ಹಾಗೂ ಕಾರ್ಯಕಾರಿ ಸಮಿತಿ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಗೆ ಸ್ಪರ್ಧಿಸುವವರು ಆಯಾಯ ಜಿಲ್ಲಾ ಘಟಕದ ಚುನಾವಣಾಧಿಕಾಯ ಕೈಗೆ ನಾಮಪತ್ರವನ್ನು ನೇರವಾಗಿ ಸಲ್ಲಿಸುವುದು ಹಾಗೂ ರಾಜ್ಯ ಪದಾಧಿಕಾರಿ ಸ್ಥಾನಕ್ಕೆ ಸ್ಪರ್ಧಿಸುವವರು ರಾಜ್ಯ ಸಂಘದ ಕಾರ್ಯಲಯದಲ್ಲಿ ಚುನಾವಣಾಧಿಕಾರಿ ಸಮ್ಮುಖದಲ್ಲಿ ಆಥವಾ ಅವರಿಂದ ಅಧಿಕಾರ ಪಡೆದವರಿಗೆ ನೇರವಾಗಿ ನಾಮಪತ್ರ ಸಲ್ಲಿಸಬೇಕು.
ಸ್ಪರ್ಧೆ ಬಯಸುವ ಅಭ್ಯರ್ಥಿಗಳು 2018-19, 2019-20, 2020-21, 2021-22 ಹೀಗೆ ಸಂಘದಲ್ಲಿ ನಾಲ್ಕು ವರ್ಷ ನಿರಂತರ ಸದಸ್ಯತ್ವ ಹೊಂದಿರಬೇಕು.
2020-21ರ (31-03-2021 ಕ್ಕೆ ಕೊನೆಯಾಗಿರುವ) ಸದಸ್ಯತ್ವದ ಪಟ್ಟಿಯು ಚುನಾವಣೆಯ ಮತದಾರರ ಪಟ್ಟಿ ಆಗಿರುತ್ತದೆ. ಮತದಾನ ಮಡಲು 2 ವóರ್ಷ ನಿರಂತರ (2020-2021, 2021-2022ರಲ್ಲಿ) ಸದಸ್ಯತ್ವವನ್ನು ಹೊಂದಿರಬೇಕು.
ರಾಜ್ಯ ಪದಾಧಿಕಾರಿ ಹುದ್ದೆಗೆ ಸ್ಪರ್ಧಿಸುವವರು ಒಂದು ಸಲವಾದರೂ ಸಂಘದ ಬೈಲಾ 22(ಸಿ) ಪ್ರಕಾರ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಒಂದು ಅವಧಿ ಪೂರೈಸಿರಬೇಕು.
 ಜಿಲ್ಲಾ ಪದಾಧಿಕಾರಿ ಹುದ್ದೆಗೆ ಸ್ಪರ್ಧೆ ಬಯಸುವವರು ಒಮ್ಮೆಯಾದರೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಒಂದು ಅವಧಿ ಪೂರೈಸಿರಲೇಬೇಕು.
 ರಾಜ್ಯ ಹಾಗೂ ಜಿಲ್ಲಾ ಘಟಕಕ್ಕೆ ಎರಡು ಬಾರಿ ಸತತವಾಗಿ ಒಂದೇ ಹುದ್ದೆಗೆ ಆಯ್ಕೆಯಾಗಿದ್ದವರು ಮೂರನೇ ಅವಧಿಗೆ ಅದೇ ಹುದ್ದೆಗೆ ಸ್ಪರ್ಧಿಸುವಂತಿಲ್ಲ.
 ಹೆಚ್ಚಿನ ಮಾಹಿತಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸು.ತ.ರಾಮೇಗೌಡರು 9242263904, ಮತ್ತು ರಾಜ್ಯ ಸಹಾಯಕ ಚುನಾವಣಾಧಿಕಾರಿ ಎನ್.ರವಿಕುಮಾರ್ 9448105095 ಇವರನ್ನು ಸಂಪರ್ಕಿಸಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸು.ತ.ರಾಮೇಗೌಡ ಅವರು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments