Publish Date: Tue, 07 Apr 2020 (10:12 IST)
Updated Date: Tue, 07 Apr 2020 (10:14 IST)
ಬಳ್ಳಾರಿ : ದೇಶ ಲಾಕ್ ಡೌನ್ ಗೊಂಡ ಹಿನ್ನಲೆಯಲ್ಲಿ ನಿತ್ರಾಣಗೊಂಡ ಮಹಿಳೆಯೊಬ್ಬಳು ಅನ್ನ, ನೀರು ಇಲ್ಲದೇ ಸಾವನಪ್ಪಿದ್ದಾರೆ.
ಗಂಗಮ್ಮ ಮೃತಪಟ್ಟ ಮಹಿಳೆಯಾಗಿದ್ದು, ಈಕೆ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾಳೆ. ಬೆಂಗಳೂರಿನಿಂದ ಸಿಂಧನೂರಿಗೆ ಪ್ರಯಾಣ ಬೆಳಸಿದ್ದ ಮಹಿಳೆ ಕಾಲ್ನಡಿಗೆಯಲ್ಲಿ ಊರಿಗೆ ತೆರಳಿದ್ದಳು.
ಓಡಾಟದಿಂದ ಸುಸ್ತಾಗಿದ್ದ ಮಹಿಳೆ ಪ್ರಯಾಣ ಬೆಳೆಸಬೇಕಾದರೆ ನಿತ್ರಾಣಗೊಂಡಿದ್ದಾಳೆ. ಅನ್ನ, ನೀರು ಇಲ್ಲದೇ ಅಸ್ವಸ್ಥಗೊಂಡಿದ್ದ ಮಹಿಳೆ ವಿಮ್ಸ್ ಗೆ ದಾಖಲು ಮಾಡಲಾಗಿದೆ. ಇದೀಗ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾಳೆ.