Select Your Language

Notifications

webdunia
webdunia
webdunia
webdunia

ಮಹಿಳಾ ದಿನಾಚರಣೆ: ಜೋಕ್ ಮಾಡಲು ‘ಹೆಂಡತಿ’ಯರೇ ಯಾಕೆ?

ಮಹಿಳಾ ದಿನಾಚರಣೆ: ಜೋಕ್ ಮಾಡಲು ‘ಹೆಂಡತಿ’ಯರೇ ಯಾಕೆ?
ಬೆಂಗಳೂರು , ಗುರುವಾರ, 5 ಮಾರ್ಚ್ 2020 (09:26 IST)
ಬೆಂಗಳೂರು: ಸರ್ದಾರ್ಜಿ ಜೋಕ್ ಗಳು ಬಿಟ್ಟರೆ ನಮ್ಮಲ್ಲಿ ಹೆಚ್ಚು ಜನಜನಿತದಲ್ಲಿರುವುದು ‘ಪತ್ನಿ’ಯರ ಮೇಲಿನ ಜೋಕ್ ಗಳು. ಆದರೆ ಹಾಸ್ಯಕ್ಕೆ ಮಹಿಳೆಯರೇ ಯಾಕೆ ಬಲಿಯಾಗಬೇಕು?


ಹೆಚ್ಚಾಗಿ ಪತಿಯನ್ನು ಕಂಟ್ರೋಲ್ ಮಾಡುವ ಪತ್ನಿಯರ ಬಗ್ಗೆ ಜೋಕ್ ಗಳಿರುತ್ತವೆ. ನೀವು ನಿಮ್ಮಷ್ಟಕ್ಕೇ ಊಹಿಸಿಕೊಳ್ಳಿ. ಒಬ್ಬ ಗಂಡಿಗೆ ಬಾಲ್ಯದಲ್ಲಿ ಅಮ್ಮ, ವಯಸ್ಸಾದ ಮೇಲೆ ಪತ್ನಿ, ವೃದ್ಧಾಪ್ಯದಲ್ಲಿ ಮಗಳು ಎಂಬಂತೆ ಒಂದು ಹೆಣ್ಣಿನ ನಿಯಂತ್ರಣವಿಲ್ಲದೇ ಇದ್ದರೆ ಆತನ ಜೀವನ ಯಾವ ಸ್ಥಿತಿ ತಲುಪುತ್ತದೆಂದು?

ಒಂದು ಕೊತ್ತಂಬರಿ ಸೊಪ್ಪು ತರುವ ಜೋಕ್ ಹಿಂದೊಮ್ಮೆ ಭಾರೀ ವೈರಲ್ ಆಗಿತ್ತು. ಆದರೆ ನಮ್ಮ ಮನೆಗೆ ಯಾವಾಗ ಏನು ಬೇಕು ಎಷ್ಟು ಬೇಕು ಎಂದು ನಿರ್ಧರಿಸುವ ಹೆಣ್ಣು ಯಾವ ಫಿನಾನ್ಸ್ ಮಿನಿಸ್ಟ್ರಿಗೂ ಕಮ್ಮಿಯಿಲ್ಲ. ಸಾಮಾನು ತರಲೆಂದು ಹೋಗಬೇಕಾದರೆ ಪುರುಷರಿಗೆ ಒಂದು ಪಟ್ಟಿ ಬೇಕೇ ಬೇಕು. ಅಲ್ಲೂ ಕನ್ ಫ್ಯೂಷನ್ ಯಾವುದು ಎಷ್ಟು ತರಲಿ ಎಂದು? ಹೇಳಿದ ಬ್ರಾಂಡ್ ಇಲ್ಲ ಅಂದ ಮೇಲೆ ಇನ್ನೊಂದು ಯಾವುದು ಖರೀದಿಸಬೇಕು ಎಂದು ಪತ್ನಿಗೆ ಫೋನ್ ಮಾಡಿಯೇ ಕೇಳಬೇಕು. ಇಲ್ಲದಿದ್ದರೂ ಅದೂ ಕನ್ ಫ್ಯೂಷನ್!

ಸಾಂಬಾರ್ ಮಾಡಲು ಸೌತೇಕಾಯಿ ತರಲು ಹೋಗುವ ಪತಿಗೆ ತರಕಾರಿ ಅಂಗಡಿಯಲ್ಲಿ ಅದು ಸಿಗದೇ ಇದ್ದಾಗ ತೊಂಡೇಕಾಯಿಯನ್ನಾದರೂ ತರಬೇಕೆಂದರೆ ಪತ್ನಿಗೊಂದು ಫೋನ್ ಹೊಡೆದೇ ಆಗಬೇಕು! ಈಗ ಹೇಳಿ ಇದನ್ನೆಲ್ಲಾ ಇಟ್ಟುಕೊಂಡು ಹೆಂಡತಿಯರೂ ಗಂಡಂದಿರ ಬಗ್ಗೆ ಜೋಕ್ ಶುರು ಮಾಡಿದರೆ ಹೇಗಿದ್ದೀತು?! ಹಾಗಾಗಿ ಹೆಂಡತಿಯರ ಬಗ್ಗೆ ಜೋಕ್ ಮಾಡುವ ಮುನ್ನ ಹುಷಾರ್!

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ದಿನಾಚರಣೆ ವಿಶೇಷ: ಅನೇಕ ‘ನಿರ್ಭಯಾ’ ಆತ್ಮಗಳು ನರಳುತ್ತಿವೆ!