Select Your Language

Notifications

webdunia
webdunia
webdunia
webdunia

ಸಪ್ತರೊಂದಿಗೆ ಸಪ್ತಪದಿ ತುಳಿದ ಹಾಟ್ ಹಾಟ್ ಮಹಿಳೆ

ಸಪ್ತರೊಂದಿಗೆ ಸಪ್ತಪದಿ ತುಳಿದ ಹಾಟ್ ಹಾಟ್ ಮಹಿಳೆ
ಬೆಂಗಳೂರು , ಸೋಮವಾರ, 19 ಸೆಪ್ಟಂಬರ್ 2016 (19:44 IST)
ನಗರದಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬಳು ದ್ರೌಪದಿಯನ್ನು ಮೀರುವಂತಹ ಕೃತ್ಯವೆಸಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಒಂದೇ ನಗರದ ವಿವಿಧ ಬಡಾವಣೆಗಳಲ್ಲಿರುವ ಏಳು ಮಂದಿಯೊಂದಿಗೆ ವಿವಾಹ ಮಾಡಿಕೊಂಡು ಹಣ ಲಪಟಾಯಿಸಿ ಪರಾರಿಯಾಗಿದ್ದಾಳೆ.
  
ಆರೋಪಿ ಯಾಸ್ಮಿನ್ ಬಾನು ವಿವಾಹವಾದ ನಂತರ ಪತಿಯ ಹಣ ಒಡುವೆ ಲಪಟಾಯಿಸಿ ಕಾಣೆಯಾಗುವುದೇ ಕಾಯಕವಾಗಿಸಿಕೊಂಡಿದ್ದಳು. ಆದರೆ, ಸತ್ಯ ಒಂದಿಲ್ಲೊಂದು ದಿನ ಬಹಿರಂಗವಾಗಬೇಕಲ್ಲವೇ?  ಅದರಂತೆ ಆಕೆಯ ನಾಲ್ಕನೇ ಪತಿ ಅಫ್ಜಲ್ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಪ್ರಕರಣ ಬಯಲಿಗೆ ಬಂದಿದೆ. 
 
ಮತ್ತೊಂದು ಅಚ್ಚರಿಯ ವಿಷಯವೆಂದರೆ ಆರೋಪಿ ಯಾಸ್ಮಿನ್ ಬಾನು ಕೃತ್ಯಕ್ಕೆ ಆಕೆಯ ಕುಟುಂಬದವರು ಬೆಂಬಲ ನೀಡುತ್ತಿದ್ದರು ಎನ್ನುವ ಆಘಾತಕಾರಿ ಅಂಶ ಕೂಡಾ ಬಯಲಿಗೆ ಬಂದಿದೆ.
 
ನಾಲ್ಕನೇಯ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಎಚ್ಚರಿಸಿದ್ದರಿಂದ ಭಯಭೀತಳಾದ ಯಾಸ್ಮಿನ್, ದೂರ ನೀಡುವುದನ್ನು ತಡೆಯಲು ಬಾಡಿಗೆ ಗುಂಡಾಗಳಿಂದ ಅಫ್ಜಲ್ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಅಫ್ಜಲ್ ದೂರು ನೀಡಿದ ನಂತರ ಪ್ರಕರಣ ಬಹಿರಂಗವಾಗುತ್ತಿದ್ದಂತೆ ಏಳು ಮಂದಿ ಮಾಜಿ ಪತಿ ಮಹಾಶಯರು ಆಕೆಯ ವಿರುದ್ಧ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡಿಗೆ ನೀರು ಬಿಡಲು ಆದೇಶ: ಮಂಡ್ಯದಲ್ಲಿ ಭುಗಿಲೆದ್ದ ಪ್ರತಿಭಟನೆ