Select Your Language

Notifications

webdunia
webdunia
webdunia
webdunia

ಮಕ್ಕಳ ಎದುರಲ್ಲೇ ಮಹಿಳೆಯ ಮೇಲೆ ನಾಲ್ವರು ದುಷ್ಕರ್ಮಿಗಳಿಂದ ಗ್ಯಾಂಗ್‌ರೇಪ್

ಮಕ್ಕಳ ಎದುರಲ್ಲೇ ಮಹಿಳೆಯ ಮೇಲೆ ನಾಲ್ವರು ದುಷ್ಕರ್ಮಿಗಳಿಂದ ಗ್ಯಾಂಗ್‌ರೇಪ್
ವಿಶಾಖಪಟ್ಟಣಂ , ಗುರುವಾರ, 6 ಜುಲೈ 2017 (14:04 IST)
ನಾಲ್ವರು ಕಾಮುಕರ ಗುಂಪೊಂದು, ಮೂವರು ಮಕ್ಕಳ ಎದುರಿಗೆ 35 ವರ್ಷ ವಯಸ್ಸಿನ ತಾಯಿಯ ಮೇಲೆ ಗ್ಯಾಂಗ್‌ರೇಪ್ ಎಸಗಿದ ಹೇಯ ಘಟನೆ ವರದಿಯಾಗಿದೆ. 
 
ಪತಿ ಉದ್ಯೋಗದ ನಿಮಿತ್ಯ ನಿನ್ನೆ ಸಂಜೆ ಮನೆಯಿಂದ ಹೊರಗಡೆ ತೆರಳಿದಾಗ ಗ್ಯಾಂಗ್‌ರೇಪ್ ಘಟನೆ ನಡೆದಿದೆ ಎಂದು ಅತ್ಯಾಚಾರಕ್ಕೊಳಗಾದ ಮಹಿಳೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 
 
ಪತಿ ಉದ್ಯೋಗಕ್ಕಾಗಿ ತೆರಳಿದ್ದಾಗ ಒಬ್ಬ ಅಪ್ರಾಪ್ತ ಸೇರಿದಂತೆ ನಾಲ್ವರು ಆರೋಪಿಗಳು ಮನೆಗೆ ನುಗ್ಗಿ ಮಕ್ಕಳ ಎದುರಿನಲ್ಲಿಯೇ ಗ್ಯಾಂಗ್‌‌ರೇಪ್ ಎಸಗಿದ್ದಾರೆ. ಘಟನೆಯ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಪೊಲೀಸರು ನಾಲ್ವರು ಕಾಮುಕರನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ ಎಂದು ಗಜುವಾಕಾ ಪೊಲೀಸ್ ಠಾಣೆಯ ಅಧಿಕಾರಿ ಟಿ.ಇಮ್ಯಾನುವೆಲ್ ರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಉಪರಾಷ್ಟ್ರಪತಿ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಬಿಹಾರ್ ಸಿಎಂ ನಿತೀಶ್ ಕುಮಾರ್