Webdunia - Bharat's app for daily news and videos

Install App

17 ವರ್ಷದ ಬಾಲಕನೊಂದಿಗೆ 24ರ ಅಂಟಿ ಪರಾರಿ:ಇದೊಂದು ವಿಚಿತ್ರ ಘಟನೆ

Webdunia
ಶನಿವಾರ, 18 ನವೆಂಬರ್ 2017 (15:57 IST)
17 ವರ್ಷದ ಬಾಲಕನನ್ನು ಅಪಹರಿಸಿದ 24 ವರ್ಷ ವಯಸ್ಸಿನ ಗೃಹಿಣಿಯ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. 
 
ಇಬ್ಬರು ಬೆಂಗಳೂರಿನಿಂದ 95 ಕಿ.ಮೀ ದೂರದಲ್ಲಿರುವ ಕೆಜಿಎಫ್‌ ನಗರದ ನಿವಾಸಿಗಳಾಗಿದ್ದಾರೆ. ಒಂದೇ ಬಡಾವಣೆಯಲ್ಲಿ ವಾಸಿಸುತ್ತಿದ್ದರಿಂದ ಚಿರಪರಿಚಿತರಾಗಿದ್ದರು. ಇಬ್ಬರ ಪರಿಚಯ ಅನೈತಿಕ ಸಂಬಂಧಕ್ಕೆ ತಿರುಗಿತ್ತು.
 
ಆರೋಪಿ ಮಹಿಳೆಯ ಪತಿ ಕುಡಿಯುವ ಟ್ಯಾಂಕರ್ ನೀರು ಸರಬರಾಜು ಮಾಡುವ ವೃತ್ತಿಯಲ್ಲಿದ್ದಾನೆ. ವಿವಾಹವಾಗಿ ಎರಡು ವರ್ಷಗಳಾಗಿದ್ದರೂ ಮಕ್ಕಳಾಗಿರಲಿಲ್ಲ. ಮಹಿಳೆಯ ಜೊತೆ ಪರಾರಿಯಾಗಿದ್ದ ಬಾಲಕ ಓದುವುದು ಬಿಟ್ಟಿದ್ದನು ಎಂದು ಮೂಲಗಳು ತಿಳಿಸಿವೆ.
 
ತನಿಖಾಧಿಕಾರಿಗಳ ಪ್ರಕಾರ, ಇಬ್ಬರು ಅಕ್ಟೋಬರ್ 24 ರಂದು ಕಾಣೆಯಾಗಿದ್ದರು. ಮಹಿಳೆಯ ಪತಿ ರಾತ್ರಿಯೇ ರಾಬರ್ಟ್ಸನ್ ಪೊಲೀಸ್ ಠಾಣೆಗೆ ತೆರಳಿ ಪತ್ನಿ 1.50 ಲಕ್ಷ ರೂ.ತೆಗೆದುಕೊಂಡು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದನು. ಮಾರನೇ ದಿನ ಬೆಳಿಗ್ಗೆ ಬಾಲಕನ ತಂದೆ ಕೂಡಾ ಮಗ ಕಾಣೆಯಾದ ಬಗ್ಗೆ ದೂರು ನೀಡಿದ್ದರು ಎಂದು ತಿಳಿಸಿದ್ದಾರೆ.
 
ಶೀಘ್ರದಲ್ಲೇ, ಗೃಹಿಣಿಯ ಮೊಬೈಲ್ ಫೋನ್ ಕರೆಗಳನ್ನು ಪತ್ತೆಹಚ್ಚಲು ಪೊಲೀಸರು ಪ್ರಾರಂಭಿಸಿದರು. ಇಬ್ಬರೂ ಪ್ರತಿದಿನ  ಸ್ಥಳಾಂತರಗೊಳ್ಳುತ್ತಿದ್ದರು, ವಿಶಾಖಪಟ್ಟಣಂ, ವಿಜಯವಾಡಾ, ನೆಲ್ಲೂರು ಮತ್ತು ತಮಿಳುನಾಡಿನ ಮಹಾಬಲೀಪುರಂ ಸೇರಿದಂತೆ ಕೆಲವು ಐತಿಹಾಸಿಕ ಸ್ಥಳಗಳಿಗೆ ಭೇಟಿ ಮಾಡಿದರು, ಅಲ್ಲಿ ಅವರು ವಸತಿ ನಿಲಯಗಳಲ್ಲಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
 
 ಅಂತಿಮವಾಗಿ, ಪೊಲೀಸರು ನವೆಂಬರ್ 13 ರಂದು ತಮಿಳುನಾಡಿನ ವೇಲನ್‌ಕಣ್ಣಿ ಪಟ್ಟಣದಲ್ಲಿರುವ ಹೋಟೆಲ್‌ನಲ್ಲಿ ತಂಗಿದ್ದ ಮಹಿಳೆ ಮತ್ತು ಬಾಲಕನನ್ನು ಬಂಧಿಸಲಾಯಿತು.
  
ಬಾಲಕ ಅಪ್ರಾಪ್ತನಾಗಿದ್ದು ಆತನೊಂದಿಗೆ ಸೆಕ್ಸ್‌ನಲ್ಲಿ ಪಾಲ್ಗೊಂಡಿರುವುದು ಅಪರಾಧವಾಗಿದೆ ಎಂದು ಮಹಿಳೆಗೆ ಪೊಲೀಸರು ತಿಳಿಹೇಳಿದರೂ ಪ್ರಯೋಜನವಾಗಲಿಲ್ಲ. ನಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು ಶೀಘ್ರದಲ್ಲಿಯೇ ಮದುವೆಯಾಗಲಿದ್ದೇವೆ ಎಂದು ಮಹಿಳೆ ತಿಳಿಸಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments