Select Your Language

Notifications

webdunia
webdunia
webdunia
webdunia

ಅಶ್ಲೀಲ ವಿಡಿಯೋ ವೈರಲ್: ಆತ್ಮಹತ್ಯೆಗೆ ಶರಣಾದ ಗೃಹಿಣಿ

ಅಶ್ಲೀಲ ವಿಡಿಯೋ ವೈರಲ್: ಆತ್ಮಹತ್ಯೆಗೆ ಶರಣಾದ ಗೃಹಿಣಿ
ಮಂಡ್ಯ , ಶುಕ್ರವಾರ, 3 ಮಾರ್ಚ್ 2017 (13:16 IST)
ತನ್ನ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡಿದ್ದರಿಂದ ನೊಂದ ಮಹಿಳೆಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹೇಯ ಘಟನೆ ಮದ್ದೂರಿನ ಸೋಮಹಳ್ಳಿಯಲ್ಲಿ ನಡೆದಿದೆ. 

 
ಸಂಗೀತಾ (25) ಸಾವಿಗೆ ಶರಣಾದ ಮಹಿಳೆಯಾಗಿದ್ದಾಳೆ. ನವೀನ್ ಎಂಬುವವರ ಜತೆ ಪ್ರೇಮವಿವಾಹವಾಗಿದ್ದ ಸಂಗೀತಾಗೆ ತನ್ನ ಪತಿಯ ಸ್ನೇಹಿತ ಅನಿಲ್ ಎಂಬಾತನ ಜತೆ ಅನೈತಿಕ ಸಂಬಂಧವಿತ್ತು. 
 
ಸಂಗೀತಾಳ ಅಶ್ಲೀಲ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ ಅನಿಲ್, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಸಿ ಆಕೆಯನ್ನು ಬಳಸಿಕೊಳ್ಳುತ್ತಿದ್ದ. 
 
ಇತ್ತೀಚಿಗೆ ಆತ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದ. ವಿಡಿಯೋ ವೈರಲ್ ಆಗುತ್ತಿದ್ದಂತೆ ಕಳಂಕ, ಅಪಮಾನಕ್ಕೆ ಹತಾಶಳಾದ ಸಂಗೀತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
 
ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿರುವ ಆಕೆ ತನ್ನ ಸಾವಿಗೆ ಅನಿಲ್ ಕಾರಣ ಎಂದು ಆರೋಪಿಸಿದ್ದಾಳೆ.
 
ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಹೈಕಮಾಂಡ್‌ಗೆ ಹಣ ರವಾನಿಸಿದ್ದಕ್ಕೆ ದಾಖಲೆಗಳಿವೆ: ಯಡಿಯೂರಪ್ಪ