Webdunia - Bharat's app for daily news and videos

Install App

ಸರ್ಕಾರದ ಕೈವಾಡವಿಲ್ಲದೇ ವಾಲ್ಮೀಕಿ ಹಗರಣ ನಡೆಯಲು ಸಾಧ್ಯವೇ ಇಲ್ಲ

Krishnaveni K
ಮಂಗಳವಾರ, 10 ಸೆಪ್ಟಂಬರ್ 2024 (15:54 IST)
ಬೆಂಗಳೂರು: ವಾಲ್ಮೀಕಿ ನಿಗಮದ 21 ಕೋಟಿ ಮೊತ್ತವನ್ನು ಬಳ್ಳಾರಿ ಚುನಾವಣೆಗೆ ಖರ್ಚು ಮಾಡಿದ್ದಾಗಿ ಇ.ಡಿ. ತನ್ನ ದೋಷಾರೋಪ ಪಟ್ಟಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಆದ್ದರಿಂದ ಬಳ್ಳಾರಿ ಸಂಸದರ ಸ್ಥಾನದಿಂದ ತುಕಾರಾಂ ಅವರನ್ನು ಚುನಾವಣಾ ಆಯೋಗವು ಕೂಡಲೇ ವಜಾ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಆಗ್ರಹಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ವಾಲ್ಮೀಕಿ ನಿಗಮದ ಹಣ ಬಳಕೆ ಆಗಿರುವುದು ಸುಸ್ಪಷ್ಟ. ವಾಲ್ಮೀಕಿ ಅಭಿವೃದ್ಧಿ ನಿಗಮದ್ದು ಅಂತರರಾಜ್ಯ ಭ್ರಷ್ಟಾಚಾರದ ಹಗರಣ ಎಂದು ಅವರು ತಿಳಿಸಿದರು.

ವಾಲ್ಮೀಕಿ ನಿಗಮದ 187 ಕೋಟಿ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಅವರು ಪ್ರಮುಖ ಪಾತ್ರ ವಹಿಸಿದ್ದಾಗಿ ಇ.ಡಿ. ಚಾರ್ಜ್‍ಶೀಟಿನಲ್ಲಿ ತಿಳಿಸಿದೆ. ಸಿದ್ದರಾಮಯ್ಯ ಮತ್ತು ಶಿವಕುಮಾರರ ಇನ್‍ವೆಸ್ಟಿಗೇಶನ್ ಟೀಂ (ಎಸ್‍ಐಟಿ) ನಾಗೇಂದ್ರರ ಹೆಸರನ್ನು ಉಲ್ಲೇಖಿಸಿಲ್ಲ. ಅವರಿಗೆ ಕ್ಲೀನ್ ಚಿಟ್ ಕೊಡಲಾಗಿದೆ. ಎಸ್‍ಐಟಿ ಇಬ್ಬರು ಅಧಿಕಾರಿಗಳ ಹೆಸರನ್ನಷ್ಟೇ ಉಲ್ಲೇಖಿಸಿದೆ ಎಂದು ಆಕ್ಷೇಪಿಸಿದರು.

ಎಸ್‍ಐಟಿ ಮೂಲಕ ಮಾಜಿ ಸಚಿವರನ್ನು ಉಳಿಸುವ ಧೋರಣೆ ಈ ಸರಕಾರದ್ದು ಎಂದು ಆರೋಪಿಸಿದರು. ಸರಕಾರದ ಹಸ್ತಕ್ಷೇಪ, ಬೆಂಬಲ ಇಲ್ಲದೆ, ವಾಲ್ಮೀಕಿ ನಿಗಮದ ಹಗರಣ ನಡೆಯಲು ಸಾಧ್ಯವೇ ಇಲ್ಲ ಎಂದು ಅವರು ವಿಶ್ಲೇಷಿಸಿದರು.

ಮಹರ್ಷಿ ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಹಗರಣವನ್ನು ಮುಚ್ಚಿಹಾಕುವ ಕೆಲಸವನ್ನು ಎಸ್‍ಐಟಿ ಮಾಡುತ್ತಿದೆ. ಇದು ಸರಿಯಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು. ಎಸ್‍ಐಟಿ ತನಿಖೆ, ಚಾರ್ಜ್ ಶೀಟ್ ಬಗ್ಗೆ ಜನರಿಗೆ ದೊಡ್ಡ ಶಂಕೆ, ಅನುಮಾನ ಇದೆ ಎಂದರು.
 
ಎರಡನೇ ಬಾರಿ ಬಿಜೆಪಿ ಕಚೇರಿ ಗುರಿ
ಎನ್‍ಐಎ ವರದಿ ಬಂದಿದೆ. ಈ ವರದಿ ಪ್ರಕಾರ ಭಯೋತ್ಪಾದಕರು ಮೊದಲು ಕರ್ನಾಟಕ ರಾಜ್ಯದ ಬಿಜೆಪಿ ಕಚೇರಿ ಜಗನ್ನಾಥ ಭವನವನ್ನು ಟಾರ್ಗೆಟ್ ಮಾಡಿದ್ದು ಗೊತ್ತಾಗಿದೆ. ಜಗನ್ನಾಥ ಭವನವನ್ನು ಸ್ಫೋಟಿಸುವುದು ಅವರ ಗುರಿಯಾಗಿತ್ತು. ಅವರ ಯೋಜನೆ ಯಶ ಪಡೆಯದೆ ರಾಮೇಶ್ವರಂ ಕೆಫೆಯನ್ನು ಸ್ಫೋಟಿಸಿದ್ದಾರೆ ಎಂದು ವರದಿ ತಿಳಿಸಿದೆ. ರಾಜ್ಯದಲ್ಲಿ ಭಯೋತ್ಪಾದಕರು ಬಿಜೆಪಿ ಕಚೇರಿಯನ್ನು ಗುರಿಯಾಗಿ ಮಾಡಿದ್ದು ಇದು ಎರಡನೇ ಬಾರಿ. ಮೊದಲ ಬಾರಿ ಬಿಜೆಪಿ ಕಚೇರಿ ಮುಂಭಾಗದಲ್ಲಿ ಬ್ಲಾಸ್ಟ್ ಆಗಿತ್ತು; ಆದರೆ ಸಾವು ನೋವು ಸಂಭವಿಸಿರಲಿಲ್ಲ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಗೂಢಚಾರಿ ಸಂಸ್ಥೆ ಏನು ಕೆಲಸ ಮಾಡುತ್ತಿದೆ? ಗೃಹ ಇಲಾಖೆ ಏನು ಕೆಲಸ ಮಾಡುತ್ತಿದೆ? ಬಸ್ 24 ಗಂಟೆ ಇಲ್ಲಿ ನಿಂತಿರುತ್ತದೆ. ಏನು ಕೆಲಸ ಮಾಡುತ್ತಿದ್ದಾರೆ ಎಂದು ಕೇಳಿದರು. ಪೊಲೀಸರು, ಇಂಟೆಲಿಜೆನ್ಸ್ ವಿಭಾಗ ಏನು ಕೆಲಸ ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಬಿಜೆಪಿ ರಾಜ್ಯ ವಕ್ತಾರ ಡಾ. ನರೇಂದ್ರ ರಂಗಪ್ಪ, ರಾಜ್ಯ ಮಾಧ್ಯಮ ಸಹ ಸಂಚಾಲಕ ಪ್ರಶಾಂತ ಕೆಡೆಂಜಿ ಅವರು ಉಪಸ್ಥಿತರಿದ್ದರು.
 
 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments