Select Your Language

Notifications

webdunia
webdunia
webdunia
webdunia

ಮಾಧ್ಯಮಗಳಿಲ್ಲದೇ ಸರ್ಕಾರ ಇಲ್ಲ: ಸಿದ್ದರಾಮಯ್ಯ

ಮಾಧ್ಯಮಗಳಿಲ್ಲದೇ ಸರ್ಕಾರ ಇಲ್ಲ: ಸಿದ್ದರಾಮಯ್ಯ
Bangalore , ಭಾನುವಾರ, 11 ಡಿಸೆಂಬರ್ 2016 (12:22 IST)
ಮಾಧ್ಯಮಗಳಿಲ್ಲದೇ ಸರ್ಕಾರ ಇಲ್ಲ, ಸರ್ಕಾರವಿಲ್ಲದೇ ಮಾಧ್ಯಮಗಳಿಲ್ಲ ಎಂಬ ಅಮೇರಿಕಾ ಅಧ್ಯಕ್ಷ ಥಾಮಸ್ ಜೆಫರ್ ಸನ್ ಮಾತು ನೆನಪಿಗೆ ಬರುತ್ತಿದೆ, ಇದನ್ನು ನಾವು ಒಪ್ಪುತ್ತೇವೆ. ನಮ್ಮ ಸರ್ಕಾರವು ಬಡವರು ಮತ್ತು ದಲಿತರು ಶೋಷಿತರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಅಖಿಲ ಭಾರತ ಸಾರ್ವಜನಿಕ ಸಂಪರ್ಕಾಧಿಕಾರಿಗಳ ಕಾರ್ಯಾಗಾರದಲ್ಲಿ ಮುಖ್ಯಮಂತ್ರಿಯವರು ಮಾತನಾಡಿದರು. ವರ್ತಮಾನದ ಸಾರ್ವಜನಿಕ ಸಂವಹನಕಾರರು ಜಾಲತಾಣಗಳು ಮಂಚೂಣಿಯಲ್ಲಿರುವೆ. 
 
ಈ ದಿನಗಳಲ್ಲಿ ಹೆಚ್ಚು ವಿಶ್ವಸನೀಯವಾದ, ವಾಸ್ತವ ಸಂಗತಿಗಳನ್ನು ಅರಿವಿಗೆ ತಂದುಕೊಂಡು ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಗತ್ಯಗಳನ್ನು ಪೂರೈಸಲು ಸರ್ಕಾರ ಮಹತ್ವ ನೀಡಲಿದೆ. ಎಂದು ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಭೇಟಿಗೆ ಪ್ರಧಾನಿ ಸಮಯ ಕೊಡುತ್ತಿಲ್ಲ