Webdunia - Bharat's app for daily news and videos

Install App

ಅಂದು ಮುಖ್ಯಮಂತ್ರಿ ಆಗುವ ಆಸೆ ಈಡೇರಲಿಲ್ಲ ಎಂದು ಈಗ ಈಡೇರಿಸಿಕೊಳ್ತಾರಾ ಮಲ್ಲಿಕಾರ್ಜುನ ಖರ್ಗೆ

Krishnaveni K
ಮಂಗಳವಾರ, 29 ಜುಲೈ 2025 (09:49 IST)
ಬೆಂಗಳೂರು: 26 ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗುವ ಆಸೆ ಈಡೇರಲಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ ಬೆನ್ನಲ್ಲೇ ಅವರು ಈಗ ಆ ಆಸೆ ಈಡೇರಿಸಿಕೊಳ್ತಾರಾ ಎಂಬ ಚರ್ಚೆ ಶುರುವಾಗಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ 26 ವರ್ಷದ ಹಿಂದೆ ನಡೆದ ಘಟನೆ ನೆನೆಸಿಕೊಂಡಿದ್ದರು. ಶಾಸಕಾಂಗ ಪಕ್ಷದ ನಾಯಕನಾಗಿ ಪಕ್ಷವನ್ನು ಗೆಲ್ಲಿಸಿದ್ದು ನಾನು. ಆದರೆ ಸಿಎಂ ಆಗಿದ್ದು ಎಸ್ಎಂ ಕೃಷ್ಣ. ಕಷ್ಟಪಟ್ಟ ನನಗೆ ಸಿಎಂ ಪಟ್ಟ ಸಿಗಲಿಲ್ಲ ಎಂದು ಖರ್ಗೆ ಬೇಸರಿಸಿಕೊಂಡಿದ್ದರು.

ಅವರು ಇಂತಹದ್ದೊಂದು ಹೇಳಿಕೆ ನೀಡಿರುವ ಬೆನ್ನಲ್ಲೇ ಈಗ ಖರ್ಗೆ ರಾಜ್ಯ ರಾಜಕೀಯಕ್ಕೆ ಬರುತ್ತಾರೆಯೇ ಎಂಬ ಚರ್ಚೆ ಶುರುವಾಗಿದೆ. ಕಾಂಗ್ರೆಸ್ ನಲ್ಲಿ ಒಂದು ಪಂಗಡ ದಲಿತರು ಸಿಎಂ ಆಗಬೇಕು ಎಂದು ಆಗ್ರಹಿಸುತ್ತಿದೆ. ಈ ನಡುವೆ ಡಿಕೆ ಶಿವಕುಮಾರ್ ಗೆ ಸಿಎಂ ಹುದ್ದೆ ಮೇಲೆ ಕಣ್ಣಿದೆ. ಆದರೆ ಇದಕ್ಕೆ ಸಿದ್ದರಾಮಯ್ಯ ಬಣದ ವಿರೋಧವಿದೆ. ಪಕ್ಷದಲ್ಲಿ ಎಲ್ಲರೂ ಒಪ್ಪಿಕೊಳ್ಳುವ ಅಭ್ಯರ್ಥಿ ಎಂದರೆ ಮಲ್ಲಿಕಾರ್ಜುನ ಖರ್ಗೆ.

ಒಂದು ವೇಳೆ ಸ್ವತಃ ಮಲ್ಲಿಕಾರ್ಜುನ ಖರ್ಗೆಯೇ ಸಿಎಂ ಅಭ್ಯರ್ಥಿ ಎಂದರೆ ಸಿದ್ದರಾಮಯ್ಯ ಬಣದ ಬೆಂಬಲವೂ ಸಿಗಲಿದೆ. ಹೀಗಾಗಿ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣದ ನಡುವೆ ಫೈಟ್ ಜೋರಾದರೆ ಖರ್ಗೆಯೇ ರಂಗಕ್ಕಿಳಿದರೂ ಅಚ್ಚರಿಯಿಲ್ಲ ಎಂಬ ಚರ್ಚೆ ರಾಜ್ಯ ಕಾಂಗ್ರೆಸ್ ನಲ್ಲಿ ಕೇಳಿಬರುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಂಪ್ಲೇಂಟ್ ತೆಗೆದುಕೊಳ್ಳಲಿಲ್ಲ ಎಂದು ಪೊಲೀಸ್ ಸ್ಟೇಷನ್ ಮುಂದೆ ಯುವಕ ಮಾಡಿದ ಕೆಲಸಕ್ಕೆ ಪೊಲೀಸರೇ ಶಾಕ್ Video

ದೆಹಲಿ ಈಗ ಬಲು ದುಬಾರಿ: ಎಲ್ಲದಕ್ಕೂ ಬ್ರಿಕ್ಸ್ ಸಮ್ಮೇಳನ ಕಾರಣ

BRICS ಸಮ್ಮೇಳನ ಶುರು, ಯಾವೆಲ್ಲಾ ನಾಯಕರು ಭಾಗಿಯಾಗ್ತಾರೆ, ಏನೆಲ್ಲಾ ಚರ್ಚೆಯಾಗುತ್ತದೆ ಇಲ್ಲಿದೆ ವಿವರ

ನಾನು ಶೇ 100 ರಷ್ಟು ಸರಿ ಎನ್ನಲ್ಲ, ಆದರೆ… ಇಡಿ ದಾಳಿ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಶಾಕಿಂಗ್ ಹೇಳಿಕೆ

ನಡೆಯುವಾಗ ನೆಲ ನೋಡಿ ಎನ್ನೋದು ಇದಕ್ಕೇ… ನಿರ್ಮಾಣ ಹಂತದ ಮನೆಯಲ್ಲಿ ನಡೆಯಿತು ಭೀಕರ ದುರಂತ Video

ಮುಂದಿನ ಸುದ್ದಿ
Show comments